ರಾಯಚೂರು:ಲೋಕಸಭಾ ಚುನಾವಣೆಗೆ ಬಿಜೆಪಿ ಕಾಂಗ್ರೆಸ್ ಪಕ್ಷಗಳಿಗೆ ಪರ್ಯಾಯವಾಗಿ ಸೋಶಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ(ಎಸ್ಯುಸಿಐ ಕಮ್ಯುನಿಸ್ಟ್) ಪಕ್ಷ ರಾಯಚೂರು ಸೇರಿದಂತೆ ರಾಜ್ಯದ 7 ಕ್ಷೇತ್ರ ಹಾಗೂ ದೇಶದ ಒಟ್ಟು 119 ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳು ಸ್ಪರ್ಧಿಸಲಿದ್ದು, ಪರ್ಯಾಯ ರಾಜಕೀಯ ಮಾಡಲಿದ್ದೇವೆ ಎಂದು ಪಕ್ಷದ ರಾಜ್ಯ ಸದಸ್ಯ ಹೆಚ್.ದಿವಾಕರ್ ತಿಳಿಸಿದರು.
ಇಂದು ನಗರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಸ್ವಾತಂತ್ರ್ಯದ ನಂತರ ಕಾಂಗ್ರೆಸ್ ಹಾಗೂ ಇತ್ತೀಚಿನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಜನವಿರೋಧಿ ಹಾಗೂ ಬಂಡವಾಳ ಶಾಹಿಪರ ಆಡಳಿತ ನಡೆಸಿದ್ದಾರೆ.ಕಳೆದ ಲೋಕಸಭಾ ಚುನಾವಣೆಯಲ್ಲಿ ಭಾರಿ ನಿರೀಕ್ಷೆ ಮೂಡಿಸಿದ್ದ ಮೋದಿ ಸರ್ಕಾರ ಮಹಿಳೆ,ದಲಿತ,ಮುಸ್ಲಿಂರ ಮೇಲೆ ಹಲ್ಲೆ,ಕೊಲೆ ಪ್ರಕರಣದಲ್ಲಿ ಭಾಗವಹಿಸಿದೆ ಅಲ್ಲದೇ ಬಂಡವಾಳ ಶಾಹಿಗಳ ಖಜಾನೆ ತುಂಬಿಸಿದ್ದಾರೆ ಎಂದು ದೂರಿದರು.
ಎಸ್ಯುಸಿಐ ಕಮ್ಯುನಿಸ್ಟ್ ಪಕ್ಷ ಹಲವಾರು ಹೋರಾಟಗಳಿಂದ ಮುಂಚೂಣಿಯಲ್ಲಿರುವ ನಮ್ಮ ಎಸ್ಯುಸಿಐ ಪಕ್ಷ ಈ ಬಾರಿ ದೇಶದ 20 ರಾಜ್ಯಗಳು ಹಾಗೂ 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟು 119 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದೇವೆ.ರಾಯಚೂರಿನಲ್ಲಿ ಕಾಮ್ರೆಡ್ ಕೆ .ಸೋಮಶೇಖರ್ ಯಾದ್ಗೀರ್ ಅವರನ್ನು ಕಣಕ್ಕಿಳಿಸಿ ಪರ್ಯಾಯ ರಾಜಕಾರಣ ಮಾಡಲು ತೀರ್ಮಾನಿಸಿದ್ದೇವೆ ಎಂದರು.
ಪ್ರಗತಿಪರ ಹೋರಾಟಗಳಲ್ಲಿ ಗುರುತಿಸಿಕೊಂಡಿರುವ ಕಾಂಗ್ರೆಸ್ ಸೋಮಶೇಖರ್ ಅವರು ಗೆಲ್ಲಲಿದ್ದಾರೆ. ಇದಕ್ಕೆ ಮತದಾರರು ಹಣ,ಹೆಂಡ ಆಮಿಷಕ್ಕೆ ಒಳಗಾಗದೆ ನಮ್ಮ ಪಕ್ಷಕ್ಕೆ ಬೆಂಬಲಿಸಬೇಕು.ಬೆಂಗಳೂರು ಕೇಂದ್ರ ಕ್ಷೇತ್ರದಲ್ಲಿ ನಟ ಪ್ರಕಾಶ್ ರಾಜ್ ಭಾಗವಹಿಸಲಿದ್ದಾರೆ. ಈ ಮುಂಚೆ ಕಾಂಗ್ರೆಸ್ನಲ್ಲಿ ಗುರುತಿಸಿಕೊಂಡಿದ್ದರು. ಟಿಕೆಟ್ ಸಿಗದ ಕಾರಣ ಪಕ್ಷೇತರರಾಗಿ ಕಣಕ್ಕಿಳಿದಿದ್ದಾರೆ. ಜನಹಿತಕ್ಕಾಗಿ ಪ್ರಕಾಶ್ ರಾಜ್ ಚುನಾವಣೆ ಅಖಾಡಕ್ಕೆ ಧುಮುಕಿದ್ದು, ಬಿಜೆಪಿ- ಕಾಂಗ್ರೆಸ್ ಅವರ ಪರ್ಯಾಯವಾಗಿ ಜನ ಅವರನ್ನು ಬೆಂಬಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.