ರಾಯಚೂರು: ಪದವಿಪೂರ್ವ ಕಾಲೇಜಿನ ಉಪನ್ಯಾಸಕರ ಕೊರತೆ ನೀಗಿಸುವಂತೆನೀರಮಾನ್ವಿಯಲ್ಲಿ ಮುಖ್ಯಮಂತ್ರಿಗೆ ವಿದ್ಯಾರ್ಥಿನಿಯರು ಮನವಿ ಸಲ್ಲಿಸಿದ್ದಾರೆ.
ನಮ್ಮ ಶಾಲೆಯಲ್ಲಿ ಕೇವಲ 7 ಜನ ಮಾತ್ರ ಶಿಕ್ಷಕರಿದ್ದಾರೆ. 7 ಜನರಿಗೂ ಉತ್ತಮ ಶಿಕ್ಷಕ ಪ್ರಶಸ್ತಿ ಬಂದಿದೆ. ಹಾಗಾಗಿ ಈ ಭಾಗದ ಎಲ್ಲ ವಿದ್ಯಾರ್ಥಿಗಳೂ ಇದೇ ಕಾಲೇಜಿಗೆ ಬರುತ್ತಾರೆ. ಜೊತೆಗೆ ಬಾಲಕಿಯರಿಗೆ ವಸತಿ ನಿಲಯ ಇಲ್ಲ. ಬಸ್ ಸೌಲಭ್ಯವೂ ಇಲ್ಲ ಎಂದು ವಿದ್ಯಾರ್ಥಿನಿಯರು ಸಿಎಂ ಬಳಿ ಸಮಸ್ಯೆ ತೋಡಿಕೊಂಡರು.