ಕರ್ನಾಟಕ

karnataka

ETV Bharat / state

ರಾಯಚೂರು: ಜೆಸಿಬಿಯ ಬಕೆಟ್​ನಲ್ಲಿ ಕುಳಿತು ಬ್ಯಾರೇಜ್ ಗೇಟ್‌ ತೆರೆಯಲು ಹರಸಾಹಸ... VIDEO - ರಾಯಚೂರು

ಗುರ್ಜಾಪುರ ಬ್ರಿಡ್ಜ್ ಕಂ ಬ್ಯಾರೇಜ್​ಗೆ 194 ಗೇಟ್​ಗಳಲ್ಲಿ ಕೇವಲ 94 ಗೇಟ್​ಗಳನ್ನು ತೆರೆದ ಕಾರಣ ಬ್ಯಾರೇಜ್ ಮುಳಗಡೆಯಾಗುವ ಭೀತಿ ಎದುರಾಗಿದೆ. ಅಲ್ಲದೇ ಗುರ್ಜಾಪುರ ಗ್ರಾಮಕ್ಕೆ ಬ್ಯಾರೇಜ್​ನ ಹಿನ್ನಿರು ನುಗ್ಗುವ ಆತಂಕ ಶುರುವಾಗಿದೆ.

Etv - Bharat
ಬ್ಯಾರೇಜ್ ಗೇಟ್‌ ತೆರೆಯಲು ಹರಸಾಹಸ.

By

Published : Jul 16, 2022, 8:59 PM IST

Updated : Jul 16, 2022, 9:06 PM IST

ರಾಯಚೂರು: ಕೃಷ್ಣಾ ನದಿ ನೀರು ಬಿಡುಗಡೆ ಹಿನ್ನೆಲೆ ರಾಯಚೂರು ತಾಲೂಕಿನ ಗುರ್ಜಾಪುರ ಬ್ರಿಡ್ಜ್ ಕಂ ಬ್ಯಾರೇಜ್ ಗೇಟ್‌ಗಳನ್ನು ತೆರೆಯಲು ಹರಸಾಹಸ ಪಡುತ್ತಿರುವ ದೃಶ್ಯಗಳು ಕಂಡು ಬರುತ್ತಿವೆ. ಜೆಸಿಬಿಯ ಬಕೆಟ್‌ನಲ್ಲಿ ಕಾರ್ಮಿಕ ಸುರಕ್ಷಾ ಕವಚಗಳೊಂದಿಗೆ ಕುಳಿತು ಗೇಟ್ ತೆರೆಯಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ನೀರಿನ ಹರಿವು ಹೆಚ್ಚಾಗಿರುವುದಿಂದ ಗೇಟ್ ಓಪನ್ ಮಾಡಲು ಆಗುತ್ತಿಲ್ಲ. ಶನಿವಾರ ಕೂಡ ಕ್ರೇನ್ ಮೂಲಕ ಗೇಟ್ ತೆರೆಯುವ ವಿಫಲ ಪ್ರಯತ್ನ ಮಾಡಿದ್ದರು.

ಗುರ್ಜಾಪುರ ಬ್ಯಾರೇಜ್​ನಲ್ಲಿ ಒಟ್ಟು 194 ಗೇಟ್​ಗಳಿವೆ. ಈ ಪೈಕಿ 94 ಗೇಟ್ ಓಪನ್ ಮಾಡಲಾಗಿದೆ. ಇದರಿಂದ ನೀರು ಹೋಗುತ್ತಿವೆ. ಆದರೆ ನಾರಾಯಣಪುರ ಜಲಾಶಯದಿಂದ 1.68 ಲಕ್ಷ ಕ್ಯೂಸೆಕ್ಸ್ ನೀರು ಹರಿದು ಬಿಡಲಾಗಿದೆ. ಇದರಿಂದ ಹೆಚ್ಚಿನ ಪ್ರಮಾಣದ ನೀರು ನದಿಗೆ ಬರುತ್ತಿದೆ. ಮುಂಜಾಗ್ರತಾ ಕ್ರಮ ಅಧಿಕಾರಿಗಳಿಗೆ ಬ್ಯಾರೇಜ್‌ನ ಎಲ್ಲಾ ಗೇಟ್‌ಗಳ ಓಪನ್ ಮಾಡದೆ ನಿರ್ಲಕ್ಷ್ಯವಹಿಸಿದೆ ಪರಿಣಾಮ ಇನ್ನುಳಿದ 100 ಗೇಟ್​ಗಳು ಓಪನ್ ಮಾಡಲು ಹರಸಹಾಸ ಪಡುವಂತಾಗಿದೆ.

ಗುರ್ಜಾಪುರ ಬ್ಯಾರೇಜ್ ಗೇಟ್‌ ತೆರೆಯಲು ಹರಸಾಹಸ

ಬ್ಯಾರೇಜ್ ಮುಳಗಡೆಯಾಗುವ ಭೀತಿ ಎದುರಾಗಿದ್ದು, ಗುರ್ಜಾಪುರ ಗ್ರಾಮಕ್ಕೆ ಬ್ಯಾರೇಜ್ ಹಿನ್ನೀರು ನುಗ್ಗುವ ಆತಂಕ ಶುರುವಾಗಿದೆ. ಮುಂಜಾಗ್ರತಾ ಕ್ರಮವಾಗಿ ಅಧಿಕಾರಿಗಳು ಗೇಟ್‌ಗಳನ್ನು ಓಪನ್ ಮಾಡಿದರೆ ಇಂತಹ ಆತಂಕವಿರುತ್ತಿರಲಿಲ್ಲ. ಆದರೆ ಅಧಿಕಾರಿಗಳ ನಿರ್ಲಕ್ಷ್ಯದ ಪರಿಣಾಮ ಇಂತಹ ವಾತಾವರಣ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ದೂರುತ್ತಿದ್ದಾರೆ.

ಇದನ್ನೂ ಓದಿ :ಕಾಫಿನಾಡಿನಲ್ಲಿ ಮಳೆ ಅವಾಂತರ: ಮನೆಗಳು ಕುಸಿತ, ಹೊಳೆಯಲ್ಲಿ ತೇಲಿ ಹೋಗುತ್ತಿರುವ ಶವ!

Last Updated : Jul 16, 2022, 9:06 PM IST

ABOUT THE AUTHOR

...view details