ಕರ್ನಾಟಕ

karnataka

ETV Bharat / state

ರಾಯಚೂರು ಜಿಲ್ಲಾಧಿಕಾರಿ ಶರತ್ ಬಿ. ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ.. - raichur news

ರಾಯಚೂರು ಜಿಲ್ಲಾಧಿಕಾರಿ ಶರತ್ ಬಿ.ಅವರನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ರಾಯಚೂರು ಜಿಲ್ಲಾಧಿಕಾರಿ ಶರತ್ ಬಿ. ವರ್ಗಾವಣೆ

By

Published : Aug 30, 2019, 9:12 AM IST

ರಾಯಚೂರು:ರಾಯಚೂರು ಜಿಲ್ಲಾಧಿಕಾರಿ ಶರತ್ ಬಿ.ಅವರನ್ನು ವರ್ಗಾವಣೆ ಮಾಡಿ ಗುರುವಾರ ಸರ್ಕಾರದ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.

ಕಲಬುರಗಿಯ ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ ಅವರನ್ನು ರಾಯಚೂರಿಗೆ ವರ್ಗಾವಣೆ ಮಾಡಲಾಗಿದೆ. ಆದರೆ, ಶರತ್ ಬಿ. ಅವರನ್ನು ವರ್ಗಾವಣೆ ಸ್ಥಳ ನಿಗದಿ ಮಾಡದೇ ಕಾಯ್ದಿರಿಸಲಾಗಿದೆ. ಇತ್ತೀಚಿಗೆ ರೈತ ಸಂಘದಿಂದ ಬೃಹತ್ ಪ್ರತಿಭಟನೆ ಮಾಡಿದಾಗ ಡಿಸಿ ಶರತ್ ಬಿ.ಅವರು ರೈತರ ಬಳಿಗೆ ಮನವಿ ಸ್ವೀಕರಿಸಲು ಬಾರದೇ ನಿರ್ಲಕ್ಷ್ಯ ಧೋರಣೆ ಅನುಸರಿಸಿದ್ದರು. ಇದರಿಂದ ರೊಚ್ಚಿಗೆದ್ದ ಚಾಮರಸ ಮಾಲಿಪಾಟೀಲ ನೇತೃತ್ವದ ರೈತ ಸಂಘ ಡಿಸಿ ಕಚೇರಿಗೆ ಮುತ್ತಿಗೆ ಹಾಕಿತ್ತು. ಈ ಘಟನೆ ಬಳಿಕ ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪನವರಿಗೆ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರು ದೂರು ಸಲ್ಲಿಸಿದ್ದರು.

ರಾಯಚೂರು ಜಿಲ್ಲಾಧಿಕಾರಿ ಶರತ್ ಬಿ. ವರ್ಗಾವಣೆ..

ರೈತರ ದೂರಿನ ಮೇರೆಗೆ ಸಿಎಂ ಬಿ ಎಸ್ ಯಡಿಯೂರಪ್ಪ ದೂರವಾಣಿ ಕರೆ ಮಾಡಿ ಜಿಲ್ಲಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದರು. ಈ ಎಲ್ಲ ಬೆಳವಣಿಗೆ ಹಿನ್ನೆಲೆಯಲ್ಲಿ ಬಿ.ಶರತ್‌ರನ್ನು ಜಿಲ್ಲೆಯಿಂದ ವರ್ಗಾವಣೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ABOUT THE AUTHOR

...view details