ಲಿಂಗಸುಗೂರು:ಗರ್ಭಿಣಿ ಮಹಿಳೆಯನ್ನು ಕರೆ ತರಲು ತೆರಳುತ್ತಿದ್ದ 108 ಆ್ಯಂಬುಲೆನ್ಸ್ ಲಾರಿಗೆ ಡಿಕ್ಕಿಯಾಗಿ ಸ್ಟಾಫ್ ನರ್ಸ್ ಸ್ಥಳದಲ್ಲೇ ಸಾವನ್ನಪ್ಪಿರುವ ಪ್ರಕರಣ ರಾಯಚೂರು ಜಿಲ್ಲೆ ಲಿಂಗಸುಗೂರ ತಾಲೂಕಿನ ಸರ್ಜಾಪುರ ಬಳಿ ಗುರುವಾರ ಮಧ್ಯರಾತ್ರಿ ನಡೆದಿದೆ.
ನಿಂತಿದ್ದ ಲಾರಿಗೆ ಆ್ಯಂಬುಲೆನ್ಸ್ ಡಿಕ್ಕಿ: ಸ್ಟಾಫ್ ನರ್ಸ್ ಸ್ಥಳದಲ್ಲೇ ಸಾವು - ಆ್ಯಂಬುಲೆನ್ಸ್ ಅಪಘಾತದಲ್ಲಿ ಸ್ಟಾಫ್ ನರ್ಸ್ ಸಾವು
ನಿಂತಿದ್ದ ಲಾರಿಗೆ ಆ್ಯಂಬುಲೆನ್ಸ್ ಡಿಕ್ಕಿ ಹೊಡೆದ ಪರಿಣಾಮ ಸ್ಟಾಫ್ ನರ್ಸ್ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.
ಆ್ಯಂಬುಲೆನ್ಸ್ಗೆ ಲಾರಿ ಡಿಕ್ಕಿ ಸುದ್ದಿ
ಯಾವುದೇ ಸೂಚನೆ ನೀಡದೇ ಇಂಡಿಕೇಟರ್ ಹಾಕದೆ ನಿಲ್ಲಿಸಿದ್ದ ಲಾರಿಗೆ ಆ್ಯಂಬುಲೆನ್ಸ್ ಡಿಕ್ಕಿಯಾಗಿದ್ದರಿಂದ ಸ್ಟಾಫ್ ನರ್ಸ್ ಸಂಗಮೇಶ ಬಳಿಗಾರ (30) ಮೃತರಾಗಿದ್ದಾರೆ.
ಪಾಮನಕೆಲ್ಲೂರಿನಲ್ಲಿನ ಗರ್ಭಿಣಿ ಮಹಿಳೆ ಕರೆತರಲು ಲಿಂಗಸುಗೂರಿನಿಂದ ಆ್ಯಂಬುಲೆನ್ಸ್ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಆ್ಯಂಬುಲೆನ್ಸ್ ಚಾಲಕ ಹನುಮಂತ ನೀಡಿದ ದೂರಿನ ಮೇಲೆ ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.