ಕರ್ನಾಟಕ

karnataka

ETV Bharat / state

ಗಂಡನ ಮನೆಯವರ ಕಿರುಕುಳ: ಪ್ರೀತಿಸಿ ಮದುವೆಯಾಗಿದ್ದ 2 ತಿಂಗಳಲ್ಲೇ ಸ್ಟಾಫ್ ನರ್ಸ್ ಆತ್ಮಹತ್ಯೆ

ಪ್ರೀತಿಸಿ ಮದುವೆಯಾಗಿ ಎರಡೇ ತಿಂಗಳಿಗೆ ಸ್ಟಾಫ್ ನರ್ಸ್ ನೇಣಿಗೆ ಶರಣಾಗಿರುವ ಘಟನೆ ರಾಯಚೂರು ಜಿಲ್ಲೆಯ ಲಿಂಗಸುಗೂರಿನಲ್ಲಿ ನಡೆದಿದೆ.

Staff nurse committed suicide
ಪ್ರೀತಿಸಿ ಮದುವೆಯಾಗಿದ್ದ ಎರಡು ತಿಂಗಳಿಗೆ ಸ್ಟಾಫ್ ನರ್ಸ್ ಆತ್ಮಹತ್ಯೆ

By

Published : Apr 15, 2021, 8:37 PM IST

ಲಿಂಗಸುಗೂರು: ಪ್ರೀತಿಸಿ ಮದುವೆ ಆದ ಎರಡು ತಿಂಗಳಲ್ಲೇ ವಿವಾಹ ವಿಚ್ಛೇದನ ಕೊಡುವಂತೆ ಪೀಡಿಸಿದ್ದಕ್ಕೆ ಬೇಸತ್ತ ಸ್ಟಾಫ್ ನರ್ಸ್ ರೇಷ್ಮಾ ಕೊರಬು (32) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಲಿಂಗಸುಗೂರು ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿದ್ದ ರೇಷ್ಮಾ ಹಟ್ಟಿ ಪಟ್ಟಣದ ಇಬ್ರಾಹಿಂ ಎಂಬುವವರನ್ನು ಪ್ರೀತಿಸಿ ಮದುವೆ ಆಗಿದ್ದರು. ಮದುವೆ ನಂತರದಲ್ಲಿ ಎರಡು ತಿಂಗಳಿಂದ ಗಂಡ ಇಬ್ರಾಹಿಂ ಮತ್ತು ಕುಟುಂಬಸ್ಥರು ವಿಚ್ಛೇದನ ನೀಡುವಂತೆ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ.

ಮೃತಳ ಸಹೋದರ ಜಾವೀದ್​ ದೂರಿನ ಮೇಲೆ 8 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ABOUT THE AUTHOR

...view details