ಕರ್ನಾಟಕ

karnataka

ETV Bharat / state

ಟ್ರಾಕ್ಟರ್ ಡ್ರೈವಿಂಗ್ ಮಾಡಿಕೊಂಡು ನೆರೆ ಪರಿಸ್ಥಿತಿ ಅವಲೋಕಿಸಿದ ಶ್ರೀರಾಮುಲು! - ಶಾಸಕ ಬಿ.ಶ್ರೀರಾಮುಲು

ಕೃಷ್ಣ ನದಿಯಿಂದ ಪ್ರವಾಹ ತುತ್ತಾಗಿರುವ ಗುರ್ಜಾಪುರ ಗ್ರಾಮಕ್ಕೆ ಶಾಸಕ ಬಿ.ಶ್ರೀರಾಮುಲು ಭೇಟಿ ನೀಡಿ ನೆರೆ ಪರಿಸ್ಥಿತಿಯನ್ನ ಅವಲೋಕಿಸಿದರು.

ಶಾಸಕ ಬಿ. ಶ್ರೀರಾಮುಲು

By

Published : Aug 12, 2019, 5:41 PM IST

ರಾಯಚೂರು: ಕೃಷ್ಣ ನದಿಯಿಂದ ಪ್ರವಾಹಕ್ಕೆ ತುತ್ತಾಗಿರುವ ಗುರ್ಜಾಪುರ ಗ್ರಾಮಕ್ಕೆ ಶಾಸಕ ಬಿ.ಶ್ರೀರಾಮುಲು ಭೇಟಿ ನೀಡಿದ್ರು.

ಕೃಷ್ಣ ನದಿಯಿಂದ ಅಪಾರ ಪ್ರಮಾಣದಲ್ಲಿ ನೀರು ನುಗ್ಗಿದ ಪರಿಣಾಮ ಸಂಚಾರಕ್ಕೆ ತೊಂದರೆಯಾಗಿದ್ದು, ಗುರ್ಜಾಪುರ ಗ್ರಾಮಕ್ಕೆ ಅವರ ವಾಹನಕ್ಕೆ ತೆರಳು ಸಾಧ್ಯವಾಗದ ಕಾರಣ ಸ್ವತಃ ಅವರೇ ಟ್ರಾಕ್ಟರ್ ಚಾಲನೆ ಮಾಡಿಕೊಂಡು ನೆರೆ ಪರಿಸ್ಥಿತಿಯನ್ನ ಅವಲೋಕಿಸಿದರು.

ನೆರೆ ಪರಿಹಾರ ಬಿಡುಗಡೆಯಲ್ಲಿ ರಾಯಚೂರು ಜಿಲ್ಲೆಯ ಕಡೆಗಣನೆ: ಸಿಎಂ ಗಮನಕ್ಕೆ ತರುವುದಾಗಿ ಶ್ರೀರಾಮುಲು ಹೇಳಿಕೆ

ಬಳಿಕ ತಾಲೂಕಿನ ಜೇಗರಕಲ್‌ ಗ್ರಾಮದಲ್ಲಿ ಆರಂಭಿಸಿರುವ ಪ್ರವಾಹ ಸಂತ್ರಸ್ತರಿಗಾಗಿ ತೆರೆಯಲಾದ ಗಂಜಿ ಕೇಂದ್ರಕ್ಕೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ್ರು. ಕೃಷ್ಣ ನದಿಯಿಂದ ರಾಯಚೂರಿನಲ್ಲಿ ಪ್ರವಾಹದಿಂದುಂಟಾದ ಸಂತ್ರಸ್ತರ ನೋವು‌ ಆಲಿಸಲು ನಿಯೋಗದೊಂದಿಗೆ ಬಂದಿದ್ದೇವೆ. ಸಂತ್ರಸ್ತರಿಗೆ ಸುರಕ್ಷಿತ ಸ್ಥಳದಲ್ಲಿ ಮನೆ ನಿರ್ಮಿಸಿಕೊಡಲಾಗುವುದು ಎಂದರು.

ರಾಯಚೂರು ಜಿಲ್ಲೆಯಲ್ಲಿ ಪ್ರವಾಹದಿಂದಾಗಿ ಸುಮಾರು 40 ಸಾವಿರ ಕೋಟಿ ರೂ ನಷ್ಟವಾಗಿದೆ. ಹಾನಿಗೊಳಗಾದವರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಪರಿಹಾರ ನೀಡಲಾಗುತ್ತದೆ. ತಾಲೂಕಿನ ಗುರ್ಜಾಪುರ ಗ್ರಾಮಸ್ಥರನ್ನ ಸ್ಥಳಾಂತರ ಮಾಡಿದ್ದ ಜೇಗರಕಲ್ ಗ್ರಾಮದಲ್ಲಿನ ಗಂಜಿ ಕೇಂದ್ರಕ್ಕೆ ಭೇಟಿ ನೀಡಿದ ಶಾಸಕ ಅಲ್ಲಿನ ಸಂತ್ರಸ್ತರೊಂದಿಗೆ ಚರ್ಚೆ ನಡೆಸಿದ್ರು. ಕೇಂದ್ರದಲ್ಲಿ ತಮ್ಮಗೆ ನೀಡುತ್ತಿರುವ ಉಪಹಾರ, ಊಟ, ಉಪಚಾರ ಬಗ್ಗೆ ಮಾಹಿತಿ ಪಡೆದುಕೊಂಡು, ತಮ್ಮಗೆ ಆಗಿರುವ ನಷ್ಟವನ್ನ ಭರಿಸುವ ಭರವಸೆ ನೀಡಿದ್ರು.

ABOUT THE AUTHOR

...view details