ರಾಯಚೂರು: ನಾರಾಯಣಪುರ ಜಲಾಶಯದಿಂದ ಮೂರುವರೆ ಲಕ್ಷ ಕ್ಯೂಸೆಕ್ಸ್ ನೀರು ಹೊರ ಬಿಟ್ಟ ಪರಿಣಾಮ ಜಿಲ್ಲೆಯ ಪುರಾತನ ದೇವಾಲಯ ಸಂಪೂರ್ಣ ಜಾಲವೃತ್ತಗೊಂಡಿದೆ. ದೇವದುರ್ಗ ತಾಲೂಕಿನ ಕೊಪ್ಪರ ಗ್ರಾಮದ ಕೃಷ್ಣಾ ನದಿ ತಟದಲ್ಲಿರುವ ಶ್ರೀಲಕ್ಷ್ಮೀನರಸಿಂಹ ಸ್ವಾಮಿ ದೇಗುಲ ಜಲಾವೃತ್ತಗೊಂಡಿದೆ.
ರಾಯಚೂರು: ಶ್ರೀಲಕ್ಷ್ಮೀನರಸಿಂಹ ಸ್ವಾಮಿ ದೇಗುಲಕ್ಕೆ ಜಲ ದಿಗ್ಬಂಧನ - ಕೃಷ್ಣಾ ನದಿ ತಟದಲ್ಲಿರುವ ಶ್ರೀಲಕ್ಷ್ಮೀನರಸಿಂಹ ಸ್ವಾಮಿ ದೇಗುಲ ಜಲಾವೃತ್ತ
ಭಾರಿ ಮಳೆಯಿಂದಾಗಿ ದೇವದುರ್ಗ ತಾಲೂಕಿನ ಕೊಪ್ಪರ ಗ್ರಾಮದ ಕೃಷ್ಣಾ ನದಿ ತಟದಲ್ಲಿರುವ ಶ್ರೀಲಕ್ಷ್ಮೀನರಸಿಂಹ ಸ್ವಾಮಿ ದೇಗುಲ ಜಲಾವೃತ್ತಗೊಂಡಿದೆ.
ಶ್ರೀಲಕ್ಷ್ಮೀನರಸಿಂಹ ಸ್ವಾಮಿ ದೇಗುಲಕ್ಕೆ ಜಲ ದಿಗ್ಬಂಧನ
ದೇವಾಲಯದಲ್ಲಿ ಪೂಜೆಗೆ ಅಡಚಣೆ ಉಂಟಾದರೂ ಹಗ್ಗದ ಸಹಾಯದಿಂದ ಆರ್ಚಕರು ದೇವಾಲಯಕ್ಕೆ ತೆರಳಿ ಪೂಜೆ ನೇರವೇರಿಸಿದ್ದಾರೆ. ಅಲ್ಲದೇ ದೇವಾಲಯಕ್ಕೆ ಭಕ್ತರು ಆಗಮಿಸಿ ದರ್ಶನ ಪಡೆಯುತ್ತಿದ್ದಾರೆ. ಇನ್ನೂ ದೇವಾಲಯ ಜಲಾವೃತ್ತಗೊಂಡಿರುವುದರಿಂದ ಗ್ರಾಮಕ್ಕೆ ನೀರು ನುಗ್ಗುವ ಭೀತಿ ಎದುರಾಗಿದೆ.
ಇದನ್ನೂ ಓದಿ : ಬೈಕ್ ನಿಲ್ಲಿಸಿ ನದಿಗೆ ಹಾರಿದ; ಕೊಳ್ಳೇಗಾಲದಲ್ಲಿ ತಮ್ಮನ ಕಣ್ಮುಂದೆಯೇ ಅಣ್ಣನ ಆತ್ಮಹತ್ಯೆ..!