ಕರ್ನಾಟಕ

karnataka

ETV Bharat / state

ದೇಶಕಂಡ ಅತ್ಯಂತ ಸರ್ವಾಧಿಕಾರಿ ನಾಯಕ ಪ್ರಧಾನಿ ಮೋದಿ: ಎಸ್.ಆರ್. ಹಿರೇಮಠ ವಾಗ್ದಾಳಿ - SR Hiremut Press meet at Raichur

ಪ್ರಧಾನಿಯ ಈ ಸರ್ವಾಧಿಕಾರದ ವರ್ತನೆ ಪ್ರಜಾಪ್ರಭುತ್ವಕ್ಕೆ ಕಂಟಕವಾಗಿದೆ. ದೇಶದಲ್ಲಿ ಎನ್ ಆರ್ ಸಿ ಸೆರಿದಂತೆ ಮತ್ತಿತರೆ ಹೊಸ ಪ್ರಜಾಪ್ರಭುತ್ವ ವಿರೋಧಿ ನಿಯಮಗಳ ಜಾರಿ ಮೂಲಕ ಅಸ್ಥಿರತೆ ಕಾರ್ಯಕ್ಕೆ ಕೈ ಹಾಕಲಾಗಿದೆ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್​ ಆರ್​ ಹಿರೇಮಠ್ ಆರೋಪಿಸಿದ್ದಾರೆ.

ಎಸ್.ಆರ್.ಹಿರೇಮಠ ವಾಗ್ದಾಳಿ

By

Published : Oct 19, 2019, 12:01 AM IST

ರಾಯಚೂರು: ಕಾಶ್ಮೀರ ವಿಶೇಷ ಸ್ಥಾನಮಾನ ರದ್ದು ಮಾಡಿರುವ ಕೇಂದ್ರದ ನಿರ್ಧಾರ ಸಂವಿಧಾನದ ಆಶಯಕ್ಕೆ ವಿರುದ್ಧವಾದದ್ದು ಎಂದು ಎಸ್.ಆರ್. ಹಿರೇಮಠ ಹೇಳಿದ್ದಾರೆ.

ನಗರದ ಪ್ರತಿಕಾಭವನದಲ್ಲಿ ಮಾತನಾಡಿದ ಅವರು, ಪ್ರಧಾನಿಯ ಈ ಸರ್ವಾಧಿಕಾರದ ವರ್ತನೆ ಪ್ರಜಾಪ್ರಭುತ್ವಕ್ಕೆ ಕಂಟಕವಾಗಿದೆ. ದೇಶದಲ್ಲಿ ಎನ್ ಆರ್ ಸಿ ಸೇರಿದಂತೆ ಮತ್ತಿತರೆ ಹೊಸ ಪ್ರಜಾಪ್ರಭುತ್ವ ವಿರೋಧಿ ನಿಯಮಗಳ ಜಾರಿ ಮೂಲಕ ಅಸ್ಥಿರತೆ ಸೃಷ್ಟಿಯಂತಹ ಕಾರ್ಯಕ್ಕೆ ಕೈಹಾಕಲಾಗಿದೆ. ಕೇಂದ್ರ ಸರ್ಕಾರ ಪ್ರಜಾಪ್ರಭುತ್ವ ವಿರೋಧಿ ನಿರ್ಧಾರಗಳನ್ನು ಕೈಗೊಳ್ಳುವ ಮೂಲಕ ದೇಶದ ನಿವಾಸಿಗಳಲ್ಲಿ ಅಭದ್ರತೆ ಉಂಟು ಮಾಡಲಾಗಿದೆ ಎಂದು ಆರೋಪಿಸಿದ್ರು.

ಇನ್ನು, ಕಾಶ್ಮೀರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಕೈಗೊಂಡಿರುವ ನಿರ್ಣಯ ಘನಘೋರ ಅಪರಾಧವಾಗಿದೆ. ಕಾಶ್ಮೀರದ ನಿವಾಸಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಬದುಕಿಗೆ ಭದ್ರತೆ ಒದಗಿಸುವ ಕಾರ್ಯ ಆಗಬೇಕು. ಆ ಮೂಲಕ ಕಾಶ್ಮೀರದಲ್ಲಿ ಸುಸ್ಥಿತಿ ಜಾರಿಗೆ ತರುವಂತಹ ಕೆಲಸವಾಗಬೇಕು. ಅದರ ಬದಲಿಗೆ ಎಮರ್ಜೆನ್ಸಿ ಮಾದರಿಯಲ್ಲಿ ಮಿಲಿಟರಿ ಹೇರಿಕೆ ಮಾಡುವುದು ಸರಿಯಲ್ಲ ಎಂದು ಹಿರೇಮಠ್​ ಹೇಳಿದ್ರು.

ಎಸ್.ಆರ್.ಹಿರೇಮಠ ವಾಗ್ದಾಳಿ

ಇನ್ನು, ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅಕ್ರಮ ಸಂಪತ್ತಲ್ಲಿ, ಸದ್ಯ ಇಡಿಗೆ ಸಿಕ್ಕಿರುವುದು ಅತ್ಯಲ್ಪ. ವಿದೇಶಗಳಲ್ಲೂ ಅಕ್ರಮ ಸಂಪತ್ತಿದೆ. ಅದನ್ನು ಪತ್ತೆ ಹಚ್ಚಿ, ವಶಕ್ಕೆ ಪಡೆಯಬೇಕು. ಅಲ್ಲದೇ ಡಿ.ಕೆ.ಶಿ ಸಹೋದರ ಕಪಿಮುಷ್ಠಿಯಲ್ಲಿರುವ ಕನಕಪುರ, ರಿಪಬ್ಲಿಕ್ ಕನಕಪುರವಾಗಬೇಕು ಎಂದು ಹಿರೇಮಠ್​ ಹೇಳಿದ್ರು.

ABOUT THE AUTHOR

...view details