ಕರ್ನಾಟಕ

karnataka

ETV Bharat / state

ಮಣ್ಣೆತ್ತಿನ ಅಮವಾಸ್ಯೆಗೆ ಹೈದರಾಬಾದ್​ ಕರ್ನಾಟಕದಲ್ಲಿದೆ ವಿಶೇಷ ಹಿನ್ನೆಲೆ..!

ಇಂದು ಮಣ್ಣೆತ್ತಿನ ಅಮವಾಸ್ಯೆ. ಮಣ್ಣಿನಲ್ಲಿ ಎತ್ತುಗಳನ್ನು ತಯಾರಿಸಿ ಪೂಜೆ ಸಲ್ಲಿಸುವ ವಿಶೇಷ ಹಬ್ಬ ಅಂತೆಯೇ ರೈತ ಮಹಿಳೆಯರು ಸಹ ಈ ಅಮವಾಸ್ಯೆಯನ್ನು ಇನ್ನೊಂದು ವಿಶೇಷ ಅರ್ಥದಲ್ಲಿ ಆಚರಿಸುತ್ತಾರೆ.

ede
ಮಣ್ಣೆತ್ತಿನ ಅಮವಾಸ್ಯೆಗೆ ಹೈದರಾಬಾದ್​ ಕರ್ನಾಟಕದಲ್ಲಿದೆ ವಿಶೇಷ ಹಿನ್ನೆಲೆ..!

By

Published : Jun 21, 2020, 7:44 PM IST

ಲಿಂಗಸುಗೂರು: ಉತ್ತರ ಕರ್ನಾಟಕ ಅದರಲ್ಲೂ ಹೈದರಾಬಾದ್​ ಕರ್ನಾಟಕ ಪ್ರದೇಶದಲ್ಲಿ ಅಚರಿಸಲ್ಪಡುವ ಮಣ್ಣೆತ್ತಿನ ಅಮವಾಸ್ಯೆಗೆ ಆಕಾಶದಲ್ಲಿನ ಸಪ್ತ ಋಷಿ ಮಂಡಲ (ಚೆನ್ನಮ್ಮನ ದಂಡಿ) ತಳಕು ಹಾಕಿಕೊಂಡ ಕುತೂಹಲಕಾರಿ ಕತೆಯೊಂದಿದೆ.

ಮಣ್ಣೆತ್ತಿನ ಅಮವಾಸ್ಯೆಗೆ ಹೈದರಾಬಾದ್​ ಕರ್ನಾಟಕದಲ್ಲಿದೆ ವಿಶೇಷ ಹಿನ್ನೆಲೆ..!

ಹಿಂದೂ ಧರ್ಮದ ಆಚಾರ, ವಿಚಾರಗಳಲ್ಲಿ ವೈಜ್ಞಾನಿಕ ತಳಕು ಸಾಕಷ್ಟು ಸಾಮ್ಯತೆ ಹೊಂದಿವೆ. ವೈಜ್ಞಾನಿಕ ಜ್ಞಾನ ಕೊರತೆಯಿಂದ ಮೌಢ್ಯತೆ, ಸಂಪ್ರದಾಯದ ಹೆಸರಲ್ಲಿ ಕೆಲ ಹಬ್ಬ ಹರಿದಿನಗಳು ಮುಂದುವರೆದುಕೊಂಡು ಬಂದಿವೆ ಎಂಬುದು ಸಂಪ್ರದಾಯಸ್ಥರ ಅಂಬೋಣವಾಗಿದೆ. ಈ ಹಿಂದೆ ಸಾದ್ವಿ ಚೆನ್ನಮ್ಮ ಎಂಬ ರೈತ ಮಹಿಳೆ ,ಗಂಡ ಕೃಷಿ ಚಟುವಟಿಕೆ ಮಾಡುತ್ತಿದ್ದಾಗ ಮೃತಪಟ್ಟಿದ್ದ. ಪತಿ ಸರ್ವಸ್ವ ಎಂದುಕೊಂಡಿದ್ದ ಚೆನ್ನಮ್ಮ ಮಣ್ಣೆತ್ತು ಪೂಜೆ ಮಾಡಿ ಗಂಡನನ್ನು ರಕ್ಷಿಸಿದ್ದಳು.

ಆಗಾ ಪರಮಾತ್ಮ ಆಕಾಶ ಭೂಮಿ ಇರುವವರೆಗೆ ದಂಡೆ ರೂಪದಲ್ಲಿ (ಸಪ್ತ ಋಷಿ ಮಂಡಲ) ಅಜರಾಮರವಾಗಿರು ಎಂದು ವರ ನೀಡಿದ್ದನಂತೆ. ಈಗಲು ಆಕಾಶದಲ್ಲಿ ದಂಡಿ ಆಕಾರ ಚುಕ್ಕಿಗಳ ಗುಂಪಿಗೆ ಚೆನ್ನಮ್ಮನ ದಂಡಿ ಎಂದು ಕರೆಯುವುದು ವಾಡಿಕೆ ಎಂಬ ಕತೆ ಹೇಳುತ್ತಾರೆ. ಈ ಕಾರಣದಿಂದ ರೈತ ಮಹಿಳೆಯರು, ಕೃಷಿಯಲ್ಲಿ ತೊಡಗಿರುವ ಪತಿ ರಕ್ಷಣೆದ್ಯೂತಕವಾಗಿ ಈ ಅಮವಾಸ್ಯೆ ಆಚರಣೆಗೆ ಮಹತ್ವ ಪಡೆದುಕೊಂಡಿದೆ ಎನ್ನುತ್ತಾರೆ.

ABOUT THE AUTHOR

...view details