ರಾಯಚೂರು:ಕಳ್ಳತನ ಪ್ರಕರಣದ ವಿಚಾರಣೆ ನಡೆಸುವ ನೆಪದಲ್ಲಿ ಪೊಲೀಸ್ ಠಾಣೆಯಲ್ಲಿ ವ್ಯಕ್ತಿಯನ್ನು ಥಳಿಸಿದ್ದಾರೆ ಎಂಬ ಆರೋಪಕ್ಕೆ ಎಸ್ಪಿ ವೇದಮೂರ್ತಿ ಸ್ಪಷ್ಟನೆ ನೀಡಿದ್ದಾರೆ.
ನಾಲ್ಕು ತಿಂಗಳ ಹಿಂದೆ ಆಂಜಿನಯ್ಯ ಎಂಬುವವರು ತಮ್ಮ ಮನೆಯಲ್ಲಿದ್ದ ಸುಮಾರು 55 ಸಾವಿರ ರೂ. ಕಳ್ಳತನವಾಗಿದ್ದು, ಭೀಮಣ್ಣ ಎಂಬುವವರು ಕಳ್ಳತನ ಮಾಡಿದ್ದಾರೆಂದು ಇಡಪನೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ತಾಲೂಕಿನ ಲಿಂಗಖಾನದೊಡ್ಡಿ ಗ್ರಾಮದ ಭೀಮಣ್ಣ ಎಂಬ ಯುವಕನನ್ನು ಪೊಲೀಸರು ಠಾಣೆಗೆ ಕರೆದೊಯ್ದು ಮನ ಬಂದಂತೆ ಥಳಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತ್ತು. ಸ್ವತಃ ಗಾಯಾಳು ಭೀಮಣ್ಣ ಹಾಗೂ ಅವರ ಸಂಬಂಧಿಕರು ಆರೋಪ ಮಾಡಿದ್ದರು.
ಆಂಜಿನನಯ್ಯ ಅವರ ಆರೋಪದ ಹಿನ್ನೆಲೆಯಲ್ಲಿ ಗ್ರಾಮಸಭೆ ನಡೆಸಿ ತಪ್ಪು ಮಾಡಿಲ್ಲ ಎಂದು ಸಾಬೀತು ಮಾಡಲಾಗಿತ್ತು. ಇದಕ್ಕೆ ಆಂಜಿನಯ್ಯ ಸಹ ಸುಮ್ಮನಾಗಿದ್ದರು. ಆದ್ರೆ ಇದ್ದಕ್ಕಿದ್ದಂತೆ ಈಗ ಯಾವುದೋ ಹಳೆ ದ್ವೇಷದಿಂದ ಇಡಪನೂರು ಪೊಲೀಸರಿಗೆ ಭೀಮಣ್ಣನ ವಿರುದ್ಧ ದೂರು ನೀಡಿದ್ದಾನೆ.
ಈ ಪ್ರಕರಣದ ಕುರಿತು ಎಸ್ಪಿ ವೆದಮೂರ್ತಿ ಸ್ಪಷ್ಟನೆ ನೀಡಿದ್ದು, ಕಳ್ಳತನ ಮಾಡಿರುವ ಶಂಕೆ ಹಾಗೂ ದೂರಿನ ಮೇರೆಗೆ ಭೀಮಣ್ಣ ಎಂಬ ಯುವಕನ್ನನ್ನು ವಿಚಾರಣೆಗೆಂದು ಠಾಣೆಗೆ ಕರೆದು ಥಳಿಸಿದ್ದಾರೆ ಎಂಬ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಅವರಿಗೆ ಪೊಲೀಸರು ಥಳಿಸಿಲ್ಲ. ಭೀಮಣ್ಣನಿಗೆ ಥಳಿಸಿದ್ದೇ ಆದಲ್ಲಿ ಸಂಬಂಧಪಟ್ಟ ಪೊಲೀಸರ ವಿರುದ್ಧ ದೂರು ನೀಡಿದ್ದಲ್ಲಿ ತನಿಖೆ ನಡೆಸಿ ತಪ್ಪಿತಸ್ಥ ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.