ಕರ್ನಾಟಕ

karnataka

ETV Bharat / state

ಎಸ್.ಪಿ ವೇದಮೂರ್ತಿ ಕುರಿತಾದ 'ಬೆಳಕಿನ ತೇರು ಪುಸ್ತಕ' ಬಿಡುಗಡೆ - SP Vedamoorthy related Belakina teru book

ರಾಯಚೂರು ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಇಂದು ಕಲಾ ಸಂಕುಲ ಸಂಸ್ಥೆಯ 8 ನೇ ವಾರ್ಷಿಕೋತ್ಸವ ಸಮಾರಂಭ ಹಾಗೂ ಎಸ್.ಪಿ ವೇದಮೂರ್ತಿ ಅವರ ಕುರಿತಾದ 'ಬೆಳಕಿನ ತೇರು ಪುಸ್ತಕ' ಬಿಡುಗಡೆ ಕಾರ್ಯಕ್ರಮ ನಡೆಯಿತು.

SP Vedamurthy
ಎಸ್.ಪಿ ವೇದಮೂರ್ತಿ ಅವರಿಗೆ ಸನ್ಮಾನ ಕಾರ್ಯಕ್ರಮ

By

Published : Jan 12, 2020, 8:29 PM IST

ರಾಯಚೂರು: ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಇಂದು ಕಲಾ ಸಂಕುಲ ಸಂಸ್ಥೆಯ 8 ನೇ ವಾರ್ಷಿಕೋತ್ಸವ ಸಮಾರಂಭ ಹಾಗೂ ಎಸ್.ಪಿ ವೇದಮೂರ್ತಿ ಅವರ ಕುರಿತಾದ 'ಬೆಳಕಿನ ತೇರು ಪುಸ್ತಕ' ಬಿಡುಗಡೆ ಕಾರ್ಯಕ್ರಮ ನಡೆಯಿತು.

ಎಸ್.ಪಿ ವೇದಮೂರ್ತಿ ಅವರಿಗೆ ಸನ್ಮಾನ ಕಾರ್ಯಕ್ರಮ

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ, ನಮ್ಮ ದೇಶ ಬಹುಸಂಸ್ಕೃತಿ, ಬಹು ಧರ್ಮ, ಭಾಷೆಗಳನ್ನು ಹೊಂದಿ ವೈವಿಧ್ಯಮಯ ಭಾವೈಕ್ಯತೆಯ ಕೇಂದ್ರವಾಗಿ ವಿಶಿಷ್ಟವಾಗಿ ಗುರುತಿಸಿಕೊಂಡಿದೆ. ಆದ್ರೆ ಇಂದಿನ ದಿನಗಳಲ್ಲಿ ಒಂದು‌ ಧರ್ಮ, ಭಾಷೆ, ಆದಿವಾಸಿಯರ, ಬಡವರ ಪರವಾಗಿ ಮಾತನಾಡಿದರೆ ಪ್ರಧಾನಿ ವಿರೋಧಿ, ದೇಶ ದ್ರೋಹಿಗಳಂತೆ ಬಿಂಬಿಸಿ ಹೀಯಾಳಿಸಲಾಗುತ್ತಿದೆ ಎಂದು ಆರೋಪಿಸಿದರು.

ದೇಶದ ಅಭಿವೃದ್ಧಿಯಲ್ಲಿ‌ ಬಡವರ, ಶ್ರಮಿಕರ, ಕುಶಲ ಕಾರ್ಮಿಕರ ಪಾತ್ರ ಮುಖ್ಯವಾಗಿದೆ. ಅವರನ್ನು ಸಮಾನದಿಂದ ಗೌರವಿಸಬೇಕಿದೆ‌. ಎಲ್ಲರೊಂದಿಗೆ ಸಾಮರಸ್ಯ ಕಾಪಾಡಿಕೊಂಡು ಆಡಳಿತ ನಡೆಸಲು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಗೆ ಸವಾಲಿನ ಕೆಲಸವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ರಾಯಚೂರಿನ ಎಸ್.ಪಿ ವೇದಮೂರ್ತಿ ಅವರು ಕಾನೂನು ಪಾಲನೆಯ ಜೊತೆಗೆ ಪರಿಸರ ಕಾಳಜಿ, ಜನಸ್ನೇಹಿ ಆಡಳಿತ ನೀಡುತ್ತಿರುವುದು ಶ್ಲಾಘನೀಯ. ಈ ಹಿಂದೆ ಪೊಲೀಸರೆಂದರೆ ಜನರಲ್ಲಿ‌ ಭಯದ ವಾತಾವರಣವಿತ್ತು. ಆದ್ರೆ ರಾಯಚೂರಿನ‌ ಎಸ್​ಪಿ ‌ಅವರು ಬಡವರ, ನಿರ್ಗತಿಕರ, ಶ್ರಮ ಜೀವಿಗಳೊಂದಿಗೆ ಸ್ನೇಹ ಪರವಾಗಿ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದ್ದಾರೆ ಎಂದರು.

ಇನ್ನು ಕಾರ್ಯಕ್ರಮದಲ್ಲಿ ಎಸ್.ಪಿ ವೇದಮೂರ್ತಿ ಅವರ ಕುರಿತು, ರೇಖಾ ಬಡಿಗೇರ್ ಅವರು ಬರೆದ ಬೆಳಕಿನ ತೇರು ಪುಸ್ತಕ ಬಿಡುಗಡೆ ಮಾಡಲಾಯಿತು. ಅಲ್ಲದೇ ಎಸ್.ಪಿ ವೇದಮೂರ್ತಿ ದಂಪತಿ, ಅವರ ತಂದೆ-ತಾಯಿ ಹಾಗೂ ವಿವಿಧ‌ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ABOUT THE AUTHOR

...view details