ರಾಯಚೂರು :ನಿಜಾಮುದ್ದೀನ್ ಪ್ರದೇಶದ ಮಸೀದಿಯಲ್ಲಿ ನಡೆದ ಧರ್ಮಸಭೆಗೂ ಮುನ್ನ ದೆಹಲಿಗೆ ಹೋಗಿ ಬಂದವರಿಗೆ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ ಎಂದು ಎಸ್ಪಿ ಡಾ.ಸಿ.ಬಿ ವೇದಮೂರ್ತಿ ಹೇಳಿದ್ದಾರೆ.
ದೆಹಲಿಗೆ ಹೋಗಿ ಬಂದವರ ಮೇಲೆ ನಿಗಾ ವಹಿಸಲಾಗಿದೆ: ರಾಯಚೂರು ಎಸ್ಪಿ - Raichur SP news
ದೆಹಲಿಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮಕ್ಕೆ ಏಳು ಜನ ಹೋಗಿದ್ದರು. ಆದ್ರೆ ಅವರ್ಯಾರೂ ನಿಜಾಮುದ್ದೀನ್ ಧರ್ಮಸಭೆಗೆ ತೆರಳಿರಲಿಲ್ಲ. ಅಲ್ಲೇ ಸುತ್ತಮುತ್ತಲಿನ ಪ್ರದೇಶಕ್ಕೆ ಹೋಗಿ ಹಿಂತಿರುಗಿದ್ದಾರೆ ಎಂದು ಎಸ್ಪಿ ಡಾ. ಸಿ. ಬಿ. ವೇದಮೂರ್ತಿ ತಿಳಿಸಿದ್ದಾರೆ.
ಎಸ್ಪಿ ಡಾ. ಸಿ. ಬಿ. ವೇದಮೂರ್ತಿ
ದೆಹಲಿಗೆ ಏಳು ಜನ ಹೋಗಿದ್ದು ಅವರ್ಯಾರೂ ನಿಜಾಮುದ್ದೀನ್ ಧರ್ಮಸಭೆಯಲ್ಲಿ ಪಾಲ್ಗೊಂಡಿಲ್ಲ. ಅಲ್ಲೇ ಸುತ್ತಮುತ್ತಲಿನ ಪ್ರದೇಶಕ್ಕೆ ಹೋಗಿ ಹಿಂದಿರಿಗಿದ್ದಾರೆ. ಅಲ್ಲಿಗೆ ಹೋಗಿದ್ದ 7 ಮಂದಿಯ ಪೈಕಿ 6 ಜನ ವಾಪಸ್ ಬಂದಿದ್ದು, ಇನ್ನೊಬ್ಬರು ದೆಹಲಿಯಲ್ಲಿಯೇ ಇದ್ದಾರೆ. ಅಲ್ಲಿಗೆ ಹೋಗಿ ಬಂದವರನ್ನ ಹೋಮ್ ಕ್ವಾರಂಟೇನ್ ಮಾಡುವ ಮೂಲಕ ನಿಗಾ ವಹಿಸಲಾಗಿದೆ ಎಂದು ಅವರು ತಿಳಿಸಿದರು.