ಕರ್ನಾಟಕ

karnataka

ETV Bharat / state

ಸಿಬ್ಬಂದಿಗೆ ಬೈಕ್​ ಗಿಫ್ಟ್​ ನೀಡಿದ ರಾಯಚೂರು ಎಸ್ಪಿ! - ಎಸ್ಪಿ ಡಾ.ಸಿ.ಬಿ.ವೇದಮೂರ್ತಿ

ಪೊಲೀಸ್ ವಾರ್ಷಿಕ ಕ್ರೀಡಾಕೂಟದಲ್ಲಿ ಸರ್ವಶ್ರೇಷ್ಠ ಕ್ರೀಡಾಪಟುವಾಗಿ ಹೊರಹೊಮ್ಮಿದ ಗಬ್ಬೂರು ಪೊಲೀಸ್ ಠಾಣೆಯ ಸಿಪಿಸಿ ಮಲ್ಲಿಕಾರ್ಜುನ ಅವರಿಗೆ ಎಸ್ಪಿ ವೇದಮೂರ್ತಿ ಅವರು ಕೊಡುಗೆಯೊಂದನ್ನು ನೀಡಿ, ಬೆನ್ನು ತಟ್ಟಿದ್ದಾರೆ.

bike gift
ಬೈಕ್​ ಗಿಫ್ಟ್

By

Published : Dec 21, 2019, 9:02 PM IST

ರಾಯಚೂರು: 2019ನೇ ಸಾಲಿನ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟದಲ್ಲಿ ಸರ್ವಶ್ರೇಷ್ಠ ಕ್ರೀಡಾಪಟುವಾಗಿ ಹೊರಹೊಮ್ಮಿದ ದೇವದುರ್ಗ ತಾಲೂಕಿನ ಗಬ್ಬೂರು ಪೊಲೀಸ್ ಠಾಣೆಯ ಸಿಪಿಸಿ ಮಲ್ಲಿಕಾರ್ಜುನ ಅವರಿಗೆ ಎಸ್ಪಿ ಡಾ.ಸಿ.ಬಿ.ವೇದಮೂರ್ತಿ ಅವರು ಬೈಕ್ ಗಿಫ್ಟ್ ನೀಡಿದ್ದಾರೆ.

ಕಾನೂನು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ಹೊತ್ತ ಪೊಲೀಸ್ ಇಲಾಖೆಯಲ್ಲಿ ಶಿಸ್ತು ಹಾಗೂ ಫಿಟ್ನೆಸ್ ಮುಖ್ಯವಾಗಿದ್ದು, ಇದಕ್ಕೆ ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸುವುದು ಅವಶ್ಯವಾಗಿದೆ.

ಜಿಲ್ಲಾ ಪೊಲೀಸ್ ಇಲಾಖೆಯಿಂದ ಪ್ರತಿ ವರ್ಷ ಕ್ರೀಡಾಕೂಟ ನಡೆಯುತ್ತಿದ್ದು, ಮಲ್ಲಿಕಾರ್ಜುನ ಅವರು ಸತತ 5 ವರ್ಷಗಳಿಂದ (2015 ರಿಂದ 2019 ರವರೆಗೆ) ಸರ್ವಶ್ರೇಷ್ಠ ಕ್ರೀಡಾಪಟುವಾಗಿದ್ದಾರೆ. ಇದನ್ನು ಮೆಚ್ಚಿದ ಎಸ್​ಪಿ ವೇದಮೂರ್ತಿ ಅವರು ಮಲ್ಲಿಕಾರ್ಜುನ ಅವರಿಗೆ ಬೈಕ್​ ಗಿಫ್ಟ್​ ನೀಡಿ ಪ್ರೋತ್ಸಾಹಿಸಿದ್ದಾರೆ.

ABOUT THE AUTHOR

...view details