ರಾಯಚೂರು: ಆಸ್ತಿ ವಿಚಾರವಾಗಿ ಮಗ ತಂದೆಯನ್ನೇ ಕೊಲೆ ಮಾಡಿರುವ ಘಟನೆ ರಾಯಚೂರು ತಾಲೂಕಿನ ವಡ್ಡೆಪಲ್ಲಿ ಗ್ರಾಮದಲ್ಲಿ ನಡೆದಿದೆ.
ರಾಯಚೂರು: ಆಸ್ತಿಗಾಗಿ ತಂದೆಯನ್ನೇ ಕೊಲೆ ಮಾಡಿದ ಪಾಪಿ ಮಗ - ರಾಯಚೂರು ತಂದೆ ಕೊಂದ ಮಗ
ಆಸ್ತಿ ವಿಚಾರವಾಗಿ ಮಗ ತಂದೆಯನ್ನ ಕೊಲೆ ಮಾಡಿರುವ ಘಟನೆ ರಾಯಚೂರು ತಾಲೂಕಿನ ವಡ್ಡೆಪಲ್ಲಿ ಗ್ರಾಮದಲ್ಲಿ ನಡೆದಿದೆ.
ಕೃಷ್ಣಪ್ಪ (75) ಕೊಲೆಯಾದ ವ್ಯಕ್ತಿ. ಮಗ ಗಂಗಪ್ಪ ಪಿತ್ರಾರ್ಜಿತವಾಗಿ ಬರುವ ಆಸ್ತಿಗಾಗಿ ತಂದೆಯೊಂದಿಗೆ ಪದೇಪದೆ ಜಗಳವಾಡುತ್ತಿದ್ದ. ತಡರಾತ್ರಿ ತಂದೆಯೊಂದಿಗಿನ ಜಗಳ ವಿಕೋಪಕ್ಕೆ ತಿರುಗಿದ್ದು,ಈ ವೇಳೆ ಮಗ ತಂದೆಯನ್ನ ಅವಾಚ್ಯ ಶಬ್ದಗಳ ನಿಂಧಿಸುತ್ತಿದ್ದ. ಆಗ ತಾಯಿ ಮಗನನ್ನ ಸಮಾಧಾನಪಡಿಸಲು ಮುಂದದಾಗ ಆಕೆಗೂ ಹೊಡೆದಿದ್ದಾನೆ. ಬಳಿಕ ಸ್ಥಳದಲ್ಲಿ ಬಿದ್ದಿದ್ದ ಸಿಮೆಂಟ್ ಕಲ್ಲಿನಿಂದ ತಂದೆಗೆ ಮೇಲೆ ಹಲ್ಲೆ ಮಾಡಿದ್ದಾನೆ.
ಇದರಿಂದ ತೀವ್ರ ಗಾಯಗೊಂಡ ತಂದೆ, ತೀವ್ರ ರಕ್ತ ಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದು, ಈ ಕುರಿತು ಯಾಪಲದಿನ್ನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.