ಕರ್ನಾಟಕ

karnataka

ETV Bharat / state

ಕೊರೊನಾ ಸೋಂಕಿತ ತಾಯಿಯೊಂದಿಗೆ ಆಸ್ಪತ್ರೆಗೆ ಬಂದ ಮಗ! ವಿಡಿಯೋ ವೈರಲ್​​​ - ರಾಯಚೂರಿನಲ್ಲಿ ಕೊರೊನಾ ಪ್ರಕರಣ

ಕೊರೊನಾ ಸೋಂಕಿನ ಭಯವಿಲ್ಲದೆ ಮಗನೊಬ್ಬ ಸೋಂಕಿತ ತಾಯಿಯೊಂದಿಗೆ ಪಿಪಿಇ ಕಿಟ್​ ಧರಿಸದೆ ಆಸ್ಪತ್ರೆಗೆ ತೆರಳಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.

fcsd
ಕೊರೊನಾ ಸೋಂಕಿತ ತಾಯಿಯೊಂದಿಗೆ ಆಸ್ಪತ್ರೆಗೆ ಬಂದ ಮಗ

By

Published : Aug 1, 2020, 1:41 PM IST

ರಾಯಚೂರು: ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಗೌಡೂರ ಗ್ರಾಪಂ ಉಪಾಧ್ಯಕ್ಷೆಗೆ ಕೊರೊನಾ ತಗುಲಿದ್ದು, ಸೋಂಕಿತ ತಾಯಿಯೊಂದಿಗೆ ಮಗ ಆಸ್ಪತ್ರೆಗೆ ಬಂದ ಘಟನೆ ನಡೆದಿದೆ.

ಕೊರೊನಾ ಸೋಂಕಿತ ತಾಯಿಯೊಂದಿಗೆ ಆಸ್ಪತ್ರೆಗೆ ಬಂದ ಮಗ!

55 ವರ್ಷದ ಮಹಿಳೆ‌ಯಲ್ಲಿ ಸೋಂಕು ಪತ್ತೆಯಾಗಿದ್ದರಿಂದ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಬೇಕಿತ್ತು. ಈ ವೇಳೆ ಸೋಂಕಿತ ತಾಯಿಯೊಂದಿಗೆ ಮಗ ಕೋವಿಡ್ ಆಸ್ಪತ್ರೆಗೆ ಬಂದಿದ್ದು, ಪಿಪಿಇ ಕಿಟ್ ಧರಿಸದೆ ಓಡಾಡಿದ್ದಾನೆ.

ಅಲ್ಲದೆ ತನ್ನ ತಾಯಿಗೆ ವೆಂಟಿಲೇಟರ್ ಆಳವಡಿಕೆ ವೇಳೆ ಆರೋಗ್ಯ ಸಿಬ್ಬಂದಿಗೆ ಹ್ಯಾಂಡ್ ಗ್ಲೌಸ್, ಪಿಪಿಇ ಕಿಟ್ ಧರಿಸದೆ ಚಿಕಿತ್ಸೆ ನೀಡುತ್ತಿರುವ ವೇಳೆ ಸಾಥ್ ನೀಡಿದ್ದಾನೆ ಎನ್ನಲಾಗಿದೆ. ಘಟನೆಯ ವಿಡಿಯೋ ಫುಲ್ ವೈರಲ್​ ಆಗಿದ್ದು, ಸಾರ್ವಜನಿಕರಲ್ಲಿ ಚರ್ಚೆಗೆ ಗ್ರಾಸವಾಗಿದೆ. ಮತ್ತೊಂದು ಕಡೆ ಸೋಂಕಿನ ಭಯವಿಲ್ಲದೆ ಮಗ ತಾಯಿಯ ಸೇವೆ ಮಾಡಿದ್ದಾನೆ ಎಂದು ಕೆಲವರು ಮಾತನಾಡಿಕೊಳ್ಳುತ್ತಿದ್ದಾರೆ.

ABOUT THE AUTHOR

...view details