ಕರ್ನಾಟಕ

karnataka

ETV Bharat / state

ಎಲೈತಿ ಕೊರೊನಾ, ನಿಮ್ಮಗೈತಿ ಕೊರೊನಾ.. ರಾಯಚೂರು ಪೊಲೀಸ್​ರೊಂದಿಗೆ ವ್ಯಕ್ತಿ ಕಿರಿಕ್​​! - covid rules violation in raichur

ಕರ್ಫ್ಯೂ ಹಿನ್ನೆಲೆಯಲ್ಲಿ ಅನಗತ್ಯ ಯಾರೂ ಸಂಚರಿಸಬಾರದೆಂದು ಈಗಾಗಲೇ ಸೂಚಿಸಲಾಗಿದೆ. ನಗರದ ನಾನಾ ಕಡೆಗಳಲ್ಲಿ ಬ್ಯಾರಿಕೇಡ್ ಹಾಕುವ ಮೂಲಕ ಅನಗತ್ಯ ಓಡಾಟಕ್ಕೆ ಸ್ಥಳೀಯ ಆಡಳಿತ ಬ್ರೇಕ್ ಹಾಕಿದೆ..

covid rules violation in raichur
ರಾಯಚೂರಿನಲ್ಲಿ ಕೋವಿಡ್​ ನಿಯಮ ಉಲ್ಲಂಘನೆ

By

Published : Jan 16, 2022, 12:22 PM IST

ರಾಯಚೂರು: ಕೋವಿಡ್​ ನಿಯಂತ್ರಣಕ್ಕೆ ಸರ್ಕಾರ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡುತ್ತಿದೆ. ನಿಯಮ ಪಾಲನೆಯಾಗುವಂತೆ ನೋಡಿಕೊಳ್ಳುವಲ್ಲಿ ಪೊಲೀಸ್​ ಇಲಾಖೆ ಪ್ರಮುಖ ಪಾತ್ರವಹಿಸಿದೆ. ಆದ್ರೆ, ಕೋವಿಡ್​ ನಿಯಮ ಪಾಲಿಸುವಂತೆ ಹೇಳಿದ ಪೊಲೀಸರೊಂದಿಗೆ ವ್ಯಕ್ತಿಯೋರ್ವ ಕಿರಿಕ್​ ಮಾಡಿಕೊಂಡಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.

ನಗರದ ತರಕಾರಿ ಮಾರುಕಟ್ಟೆಯಲ್ಲಿ ಪೊಲೀಸರು ಬೈಕ್​ನಲ್ಲಿ ಹೋಗುತ್ತಿದ್ದವನನ್ನು ತಡೆದು ಮಾಸ್ಕ್ ಧರಿಸುವಂತೆ ಹೇಳಿದ್ದಾರೆ. ಆಗ ಬೈಕ್ ಸವಾರ ಪೊಲೀಸ್​​ರೊಟ್ಟಿಗೆ ಕಿರಿಕ್ ಮಾಡಿಕೊಂಡಿದ್ದಾನೆ.

ಎಲೈತಿ ಕೊರೊನಾ, ನಿಮ್ಮಗೈತಿ ಕೊರೊನಾ ಎಂದು ಕ್ಯಾತೆ ತೆಗೆದಿದ್ದಾನೆ. ಮಾಸ್ಕ್ ಧರಿಸದಿರುವುದಕ್ಕೆ ಪೊಲೀಸ್ ದಂಡ ವಿಧಿಸಿದ್ದಾರೆ. ಬೈಕ್ ಸವಾರ ಮಾತ್ರ ಪೊಲೀಸ್​ಗೆ ಬೈಯುತ್ತಲೇ ಮುಂದೆ ಹೋಗಿದ್ದಾನೆ.

ರಾಯಚೂರಿನಲ್ಲಿ ಕೋವಿಡ್​ ನಿಯಮ ಉಲ್ಲಂಘನೆ?

ಜಿಲ್ಲೆಯಲ್ಲಿ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿದೆ. ಅಗತ್ಯ ವಸ್ತುಗಳ ಖರೀದಿ, ತುರ್ತು ಸೇವೆಗಳಿಗೆ ಮಾತ್ರ ವಿನಾಯಿತಿ ನೀಡಿದೆ. ಇನ್ನುಳಿದ ಎಲ್ಲವನ್ನು ರದ್ದು ಮಾಡಲಾಗಿದೆ.

ಕರ್ಫ್ಯೂ ಹಿನ್ನೆಲೆಯಲ್ಲಿ ಅನಗತ್ಯ ಯಾರೂ ಸಂಚರಿಸಬಾರದೆಂದು ಈಗಾಗಲೇ ಸೂಚಿಸಲಾಗಿದೆ. ನಗರದ ನಾನಾ ಕಡೆಗಳಲ್ಲಿ ಬ್ಯಾರಿಕೇಡ್ ಹಾಕುವ ಮೂಲಕ ಅನಗತ್ಯ ಓಡಾಟಕ್ಕೆ ಸ್ಥಳೀಯ ಆಡಳಿತ ಬ್ರೇಕ್ ಹಾಕಿದೆ.

ಇದನ್ನೂ ಓದಿ:ವ್ಯಾಪಾರ ಮಾಡಲು ಬಿಡದ ಪೊಲೀಸರು : ವಿಜಯಪುರದಲ್ಲಿ ರಸ್ತೆಗೆ ತರಕಾರಿ ಚೆಲ್ಲಿ ರೈತರ ಆಕ್ರೋಶ

ಇನ್ನೂ ಜಿಲ್ಲಾಡಳಿತ ತರಕಾರಿ, ಅಗತ್ಯ ವಸ್ತುಗಳು ಖರೀದಿಗೆ ಅವಕಾಶ ಕಲ್ಪಿಸಿದೆ. ಆದ್ರೆ, ಮಾರುಕಟ್ಟೆಯಲ್ಲಿ ಜನರು ಬಾರದೆ ಇರುವುದರಿಂದ ತರಕಾರಿ ವ್ಯಾಪಾರಿಗಳು ತೊಂದರೆ ಅನುಭವಿಸುತ್ತಿದ್ದಾರೆ.

ABOUT THE AUTHOR

...view details