ಕರ್ನಾಟಕ

karnataka

ETV Bharat / state

ಹಿಮದಲ್ಲಿ ಮೂಡಿ ಬಂದ ಕನ್ನಡ ಅಕ್ಷರ.. ತನ್ನ ಹುಟ್ಟೂರು ಬಗ್ಗೆ ಪ್ರೀತಿ ತೋರಿದ ವೀರ ಯೋಧ!

ಮೈನಸ್​ 5 ಡಿಗ್ರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೀರಯೋಧವೊಬ್ಬರು ತನ್ನ ಹುಟ್ಟೂರಿನ ಜೊತೆ ಕನ್ನಡದ ಮೇಲಿರುವ ಪ್ರೀತಿಯನ್ನು ಹಿಮದ ಮೇಲೆ ಬರೆದು ತೋರಿದ್ದಾರೆ.

soldier writes his village name on snow, soldier writes his village name on snow in Srinagar, Maski soldier work at Srinagar, ಹಿಮದ ಮೇಲೆ ತನ್ನ ಗ್ರಾಮದ ಹೆಸರು ಬರೆದ ಸೈನಿಕ, ಶ್ರೀನಗರದಲ್ಲಿ ಹಿಮದ ಮೇಲೆ ತನ್ನ ಗ್ರಾಮದ ಹೆಸರು ಬರೆದ ಸೈನಿಕ, ಶ್ರೀನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಸ್ಕಿ ಮೂಲದ ಸೈನಿಕ,
ಮಸ್ಕಿ ಸೈನಿಕ ಮನೋಜ್ ಕುಮಾರ್

By

Published : Jan 10, 2022, 9:05 AM IST

ರಾಯಚೂರು:ಕಳೆದ 10 ವರ್ಷಗಳಿಂದ ದೇಶ ಸೇವೆಯಲ್ಲಿ ತೊಡಗಿರುವ ರಾಯಚೂರು ಜಿಲ್ಲೆಯ ಮಸ್ಕಿ ಮೂಲದ ವೀರಯೋಧರೊಬ್ಬರು ಹಿಮ ಪರ್ವತದಲ್ಲಿ ತನ್ನ ಹುಟ್ಟೂರಿನ ಹೆಸರು ಬರೆದು ಪ್ರೀತಿ ತೋರಿದ್ದಾರೆ.

ಮಸ್ಕಿ ಎಂದು ಹೆಸರು ಬರೆದಿರುವ ಸೈನಿಕ ಮನೋಜ್ ಕುಮಾರ್

ಜಿಲ್ಲೆಯ ಮಸ್ಕಿ ಮೂಲದ ವೀರಯೋಧ ಮನೋಜ್ ಕುಮಾರ್ ದೇಶದ ಸೈನ್ಯದಲ್ಲಿ ಕಳೆದ 10 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಭಾನುವಾರ (ನಿನ್ನೆ) ಮೈನಸ್ಸ್ 5 ಡಿಗ್ರಿ ಸೆಲ್ಸಿಯಸ್ ಇರುವ ಶ್ರೀನಗರದ ಹಿಮ ಪರ್ವತದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ವೇಳೆ ಹಿಮದ ಮೇಲೆ ‘ಮಸ್ಕಿ’ ಅಂತಾ ತಮ್ಮ ಹುಟ್ಟೂರಿನ ಹೆಸರು ಬರೆದಿದ್ದಾರೆ.

ಮಸ್ಕಿ ಸೈನಿಕ ಮನೋಜ್ ಕುಮಾರ್

ಯೋಧ ಮನೋಜ್​ ಕನ್ನಡ ಅಕ್ಷರದಲ್ಲಿ ಹಿಮದ ಮೇಲೆ ಬರೆದಿರುವ ಮಸ್ಕಿ ಹೆಸರಿನ ಮುಂದೆ ಫೋಟೋಗಳನ್ನ ತೆಗೆಸಿಕೊಂಡು ತನ್ನ ಹುಟ್ಟೂರಿನ ಪ್ರೀತಿ ಮರೆದಿದ್ದಾರೆ. ಈ ಪೋಟೋಗಳನ್ನ ತನ್ನ ಸ್ನೇಹಿತರಿಗೆ ಹಂಚಿಕೊಂಡಿದ್ದು, ತವರಿನ ಪ್ರೀತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಓದಿ:VIDEO ನೋಡಿ: ಆಳವಾದ ಬಾವಿಗೆ ಬಿದ್ದ ಮರಿ ಆನೆ.. ಕೊನೆಗೂ ಸಿಕ್ಕಿತು ರಕ್ಷಣೆ

ಇನ್ನು ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದ್ದು, ನೆಟ್ಟಿಗರು ಸಂತಸ ವ್ಯಕ್ತಪಡಿಸಿದ್ದಾರೆ.

For All Latest Updates

ABOUT THE AUTHOR

...view details