ರಾಯಚೂರು: ವಿಕಲಚೇತನರಿಗಾಗಿ ಕೌಶಲ್ಯ ತರಬೇತಿ ಹಾಗೂ ಉದ್ಯೋಗ ಮೇಳವನ್ನ ಜಿಲ್ಲೆಯ ಲಿಂಗಸೂಗೂರು ಪಟ್ಟಣದಲ್ಲಿ ಆಯೋಜಿಸಲಾಗಿದೆ ಎಂದು ಎಪಿಡಿ ಸಂಸ್ಥೆ ನೇಮಕಾತಿ ಅಧಿಕಾರಿ ಮಂಜುನಾಥ ತಿಳಿಸಿದರು.
ರಾಯಚೂರಿನಲ್ಲಿ ವಿಕಲಚೇತನರಿಗಾಗಿ ಕೌಶಲ್ಯ ತರಬೇತಿ, ಉದ್ಯೋಗ ಮೇಳ.. - ರಾಯಚೂರಿನಲ್ಲಿ ವಿಕಲಚೇತನರಿಗಾಗಿ ಕೌಶಲ್ಯ ತರಬೇತಿ
ವಿಕಲಚೇತನರಿಗಾಗಿ ಕೌಶಲ್ಯ ತರಬೇತಿ ಹಾಗೂ ಉದ್ಯೋಗ ಮೇಳವನ್ನ ಲಿಂಗಸೂಗೂರು ಪಟ್ಟಣದಲ್ಲಿ ಆಯೋಜಿಸಲಾಗಿದೆ ಎಂದು ಎಪಿಡಿ ಸಂಸ್ಥೆ ನೇಮಕಾತಿ ಅಧಿಕಾರಿ ಮಂಜುನಾಥ ತಿಳಿಸಿದರು.
ನಗರದ ಪ್ರತಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಿಂಗಸುಗೂರು ಪಟ್ಟಣದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಡಿ.16ರಂದು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಎಂಆರ್ಡಬ್ಲ್ಯ, ವಿಆರ್ಡಬ್ಲ್ಯೂಗಳ ಸಹಯೋಗದಲ್ಲಿ ಈ ಮೇಳ ಆಯೋಜಿಸಲಾಗಿದೆ. ಜಿಲ್ಲೆಯಲ್ಲಿ 8 ಸಾವಿರ ಯುವ ವಿಕಲಚೇತನರಿದ್ದಾರೆ.
ಅವರು ಶಿಕ್ಷಣ ಪಡೆದು ಗ್ರಾಮೀಣ ಪ್ರದೇಶದಿಂದ ಹೊರ ಬಂದಿಲ್ಲ. ಅಂತಹವರನ್ನ ಗುರುತಿಸುವ ಮೂಲಕ ಆಸಕ್ತಿ ಹೊಂದಿದವರಿಗೆ ತರಬೇತಿ ನೀಡುವ ಕೆಲಸವನ್ನ ಸಂಸ್ಥೆ ಮಾಡುತ್ತಿದೆ. ಕೌಶಲ್ಯದ ಕೊರತೆಯಿಂದಾಗಿ ಉದ್ಯೋಗ ವಂಚಿತರಿಗೆ ಬೆಂಗಳೂರಿನಲ್ಲಿ 10 ದಿನದ ತರಬೇತಿ ನೀಡಿ ಉದ್ಯೋಗ ಒದಗಿಸಲಾಗುವುದು ಎಂದು ತಿಳಿಸಿದರು.