ರಾಯಚೂರು: ಜಿಲ್ಲೆಯಲ್ಲಿ ಕಳೆದ 15 ದಿನಗಳಲ್ಲಿ 6 ಜನರಲ್ಲಿ ವೈಟ್ ಫಂಗಸ್ ಪತ್ತೆಯಾಗಿದೆ.
ರಾಯಚೂರಿನಲ್ಲಿ 15 ದಿನಗಳಲ್ಲಿ 6 ವೈಟ್ ಫಂಗಸ್ ಪ್ರಕರಣ ಪತ್ತೆ - ರಾಯಚೂರಿನಲ್ಲಿ ವೈಟ್ ಫಂಗಸ್ ಪ್ರಕರಣ ಪತ್ತೆ
ರಾಯಚೂರು ಜಿಲ್ಲೆಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೋವಿಡ್ನಿಂದ ಗುಣಮುಖರಾದ 6 ಜನರಲ್ಲಿ ವೈಟ್ ಫಂಗಸ್ ಪತ್ತೆಯಾಗಿದೆ.
ನಗರದ ಖಾಸಗಿ ಆಸ್ಪತ್ರೆ ಒಂದರಲ್ಲೇ 6 ಪ್ರಕರಣ ಪತ್ತೆಯಾಗಿವೆ. ಕೋವಿಡ್ನಿಂದ ಗುಣಮುಖರಾದವರಲ್ಲಿ ವೈಟ್ ಫಂಗಸ್ ಕಂಡು ಬಂದಿದೆ. ವೈಟ್ ಫಂಗಸ್ ಚಿಕಿತ್ಸೆ ನೀಡಿದ ವೈದ್ಯ ಡಾ. ಮಂಜುನಾಥ್, ಈ ವೈಟ್ ಫಂಗಸ್ ಬಗ್ಗೆ ಹೆದರಿಕೊಳ್ಳುವ ಅಗತ್ಯವಿಲ್ಲ. 14 ದಿನ ಔಷಧಿ ಕೊಡಲಾಗುತ್ತೆ. 7 ದಿನದಲ್ಲಿ ಸೋಂಕಿತರು ಗುಣಮುಖರಾಗುತ್ತಾರೆ. ಅನ್ನನಾಳದಲ್ಲಿ ತೊಂದರೆ ನೀಡುವ ಸೋಂಕು ಜೀವಮಾರಕವಲ್ಲ. ಆದರೆ ವೈಟ್ ಫಂಗಸ್ ರಕ್ತಕ್ಕೆ ಸೇರಿದರೆ ಮಾರಣಾಂತಿಕವಾಗುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.
100 ಜನರಿಗೆ ಸ್ಟಿರೈಡ್ ಕೊಟ್ಟರೆ ಒಬ್ಬರಲ್ಲಿ ಈ ವೈಟ್ ಫಂಗಸ್ ಕಾಣಿಸಿಕೊಳ್ಳುತ್ತದೆ. ಕ್ಯಾಂಡಿಡಾ ಫಂಗಸ್, ಆಸ್ಪರ್ ಜಿಲೋಸಿಸ್ ಫಂಗಸ್ಅನ್ನು ವೈಟ್ ಫಂಗಸ್ ಎಂದು ಕರೆಯುತ್ತಾರೆ. ಜನ ಹೆದರಿಕೊಳ್ಳುವ ಅಗತ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದು, ಈಗ ಸೋಂಕು ಪತ್ತೆಯಾದ 6 ಜನರೂ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.