ಕರ್ನಾಟಕ

karnataka

ETV Bharat / state

ಸಿಂಧನೂರು : ಒಂದೇ ಕುಟುಂಬದ ಐವರ ಹತ್ಯೆ ಕೇಸ್​.. ಮತ್ತೆ ಐವರನ್ನ ಬಂಧಿಸಿದ ಪೊಲೀಸರು - Sindhanoor Taluk

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಐವರನ್ನು ಪೊಲೀಸರು ಬಂಧಿಸಿದ್ದರು. ಇನ್ನುಳಿದ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ..

Sindhunoor: case of five murder of one family ... Police arrested another five accused
ಸಿಂಧನೂರು: ಒಂದೇ ಕುಟುಂಬದ ಐವರ ಹತ್ಯೆ ಕೇಸ್​...ಮತ್ತೈವರ ಬಂಧಿಸಿದ ಪೊಲೀಸರು

By

Published : Jul 25, 2020, 8:19 PM IST

ಸಿಂಧನೂರು (ರಾಯಚೂರು) :ಸುಕಾಲಪೇಟೆಯಲ್ಲಿ ನಡೆದ ಒಂದೇ ಕುಟುಂಬದ ಐವರ ಹತ್ಯೆ ಪ್ರಕರಣ ಸಂಬಂಧಿಸಿದಂತೆ ಇನ್ನೂ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಸಿಂಧನೂರು ತಾಲೂಕಿನ ಆರ್‌ ಹೆಚ್‌ ಕ್ಯಾಂಪ್​ನ ದೊಡ್ಡ ಫಕೀರಪ್ಪ ಕೋಣದವರು, ಹೊನ್ನೂರಪ್ಪ, ಬೂದವಾಳ ಗ್ರಾಮದ ಹನುಮಂತ, ಸುಕಾಲಪೇಟೆಯ ಬದಲಿಂಗಪ್ಪ, ಅಮರೇಶ್ ಬಂಧಿತ ಆರೋಪಿಗಳು.

ಕಳೆದ ಜುಲೈ11ರಂದು ಕೌಟುಂಬಿಕ ಕಲಹ ಹಾಗೂ ಮೌನೇಶ್, ಮಂಜುಳಾ ಪ್ರೇಮ ವಿಚಾರಕ್ಕೆ ಸಂಬಂಧಿಸಿದಂತೆ ಮಂಜುಳಾ ಕುಟುಂಬದವರು ಮೌನೇಶ್ ಕುಟುಂಬದ ಐವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದರು. ಈ ಸಂಬಂಧ ಸಿಂಧನೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಐವರನ್ನು ಪೊಲೀಸರು ಬಂಧಿಸಿದ್ದರು. ಇನ್ನುಳಿದ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.

ABOUT THE AUTHOR

...view details