ರಾಯಚೂರು: ಪ್ರೇಮ ವಿವಾಹ ಹಾಗೂ ಕೌಟುಂಬಿಕ ಕಲಹ ಹಿನ್ನೆಲೆ ಜಿಲ್ಲೆಯ ಸಿಂಧನೂರು ಪಟ್ಟಣದಲ್ಲಿ ನಡೆದ ಐವರ ಹತ್ಯೆ ರಾಜ್ಯವನ್ನೇ ಬಿಚ್ಚಿ ಬೀಳಿಸಿತ್ತು. ಇದೀಗ ಆ ಬರ್ಬರ ಹತ್ಯೆಯ ಭಯಾನಕ ವಿಡಿಯೋವೊಂದು ವೈರಲ್ ಆಗಿದೆ.
ಸಿಂಧನೂರಲ್ಲಿ ಒಂದೇ ಕುಟುಂಬದ ಐವರ ಬರ್ಬರ ಹತ್ಯೆ ಪ್ರಕರಣ... ವಿಡಿಯೋ ವೈರಲ್ - Raichur Murder Video Viral
ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಸಿಂಧನೂರು ಸುಕಾಲಪೇಟೆಯಲ್ಲಿ ನಡೆದ ಹತ್ಯೆಯ ವಿಡಿಯೋ ವೈರಲ್ ಆಗಿದೆ. ಪ್ರೇಮ ವಿವಾಹ ಹಿನ್ನೆಲೆ ಹುಡುಗಿ ಮನೆಯವರು ಹುಡುಗನ ಮನೆಯ ಐವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದರು.

ವಿಡಿಯೋ
ವೈರಲ್ ವಿಡಿಯೋ
ಇದನ್ನೂ ಓದಿ:ಪ್ರೀತ್ಸೋದ್ ತಪ್ಪೆಂದ ಹುಡುಗಿ ಮನೆಯವರು.. ಕೊನೆಗೆ ಹುಡುಗನ ಮನೆಯ ಐವರನ್ನ ಹತ್ಯೆಗೈದರು..
ಮೌನೇಶ ಹಾಗೂ ಮಂಜುಳ ಎಂಬುವರ ಪ್ರೇಮ ವಿವಾಹಕ್ಕೆ ಸಂಬಂಧಪಟ್ಟಂತೆ ಸಿಂಧನೂರು ಪಟ್ಟಣದ ಸುಕಾಲಪೇಟೆಯಲ್ಲಿ ಮೌನೇಶ್ ಕುಟುಂಬದ ತಂದೆ, ತಾಯಿ, ಇಬ್ಬರು ಅಣ್ಣಂದಿರು ಹಾಗೂ ಅಕ್ಕನನ್ನು ಮಂಜುಳಾ ಕುಟುಂಬಸ್ಥರು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು.