ರಾಯಚೂರು: ಸಿದ್ದರಾಮಯ್ಯ ಅಂಡ್ ಟೀಮ್ ಚಂಬಲ್ ಕಣಿವೆ ಸಂಸ್ಕೃತಿಯಿಂದ ಬಂದವರು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು. ರಾಯಚೂರು ಜಿಲ್ಲೆಯಲ್ಲಿ ನಡೆಯುತ್ತಿರುವ ಪಂಚರತ್ನ ಯಾತ್ರೆ ಎರಡನೇ ದಿನವಾದ ಬುಧವಾರ, ಜಿಲ್ಲೆಯ ದೇವದುರ್ಗ ಹಾಗೂ ಜಾಲಹಳ್ಳಿಯಲ್ಲಿ ಯಾತ್ರೆ ಮಾಡುತ್ತಿರುವ ಹೆಚ್ಡಿ ಕುಮಾರಸ್ವಾಮಿ ಮಾಧ್ಯಮದವರೊಂದಿಗೆ ಮಾತನಾಡಿದರು. ಸಿಎಂ ಬೊಮ್ಮಾಯಿ ಅವರದ್ದು ಆಲಿಬಾಬ ಮತ್ತು 40 ಕಳ್ಳರ ತಂಡ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿ ಬಿಜೆಪಿಯದ್ದು ಆಲಿಬಾಬು ಗ್ಯಾಂಗ್ ನಿಜ, ಸಿದ್ದರಾಮಯ್ಯ ಅವರದ್ದು ಯಾವ ಗ್ಯಾಂಗ್, ಸಿದ್ದರಾಮಯ್ಯ ಅವರು ಕೂಡ ಹೇಳಬೇಕಲ್ಲ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಅವರಿಗೆ ತಿಂದ ಅನ್ನ ಅರಗಲ್ವಾ?:ಸಿದ್ದರಾಮಯ್ಯ ಅವರಿಗೆ ತಿಂದ ಅನ್ನ ಅರಗಲ್ವಾ?, ಜೆಡಿಎಸ್ ಬಗ್ಗೆ ಮಾತನಾಡದಿದ್ದರೆ. ಒಂದು ಕಡೆ ಮಾಜಿ ಸಚಿವ ರಾಮಲಿಂಗ ರೆಡ್ಡಿ ಹೇಳುತ್ತಾರೆ, ಬೆಳೆದ ಬಂದ ಪಕ್ಷದ ಬಗ್ಗೆ ಟೀಕೆ ಮಾಡಬಾರದು ಅಂತ, ಈ ಮನುಷ್ಯ ಬೆಳೆದು ಬಂದದ್ದು ಯಾವ ಪಕ್ಷದಿಂದ, ನನ್ನ ಪಕ್ಷ ದರೋಡೆ ಕೆಲಸ ಮಾಡಿಲ್ಲ. ರಿಡೋ ಹಗರಣ ಮಾಡಿ, ಡಿನೋಟಿಫೇಷನ್ 600- 700ಕೋಟಿ ಹಣ ಸಂಗ್ರಹಿದರು, ನಂತರ ಕೆಂಪಯ್ಯ ಆಯೋಗ ಅಂತ ರಚನೆ ಮಾಡಿ ಪ್ರಕರಣ ಮುಚ್ಚಿಹಾಕಿಕೊಂಡರು ಎಂದು ಆರೋಪಿಸಿದರು.
ನೀವೂ ಮತ್ತು ಬಿಜೆಪಿಯವರು ಆಲಿಬಾಬ ಮತ್ತು 40 ಮಂದಿ ಕಳ್ಳರು ಅಂದರೆ ನಾನು ಒಪ್ಪಿಕೊಳ್ಳುತ್ತೇನೆ:ನಂತರ ಮಾತನಾಡಿ ನಿಮ್ಮಂತ ಕೆಲಸ ನಾನು ಮಾಡಿಲ್ಲ, ನೀವೂ ಮತ್ತು ಬಿಜೆಪಿಯವರು ಅಲಿಬಾಬ ಮತ್ತು 40 ಮಂದಿ ಕಳ್ಳರು ಅಂದರೆ ನಾನು ಒಪ್ಪಿಕೊಳ್ಳುತ್ತೇನೆ. ಹಾಗಾದ್ರೆ ಕಾಂಗ್ರೆಸ್ ಪಕ್ಷ ಚಂಬಲ್ ಕಣಿವೆ ದರೋಡೆಕೋರರಾ?, ನಾನು ಹೇಳುತ್ತೇನೆ ಸಿದ್ದರಾಮಯ್ಯ ಅಂಡ್ ಟೀಂ ಚಂಬಲ್ ಕಣಿವೆ ದರೋಡೆಕೋರರ ಸಂಸ್ಕೃತಿಯಿಂದ ಬಂದವರು, ಮಾತನಾಡಬೇಕಾದರೆ ಎಚ್ಚರಿಕೆಯಿಂದ ಮಾತನಾಡಿ, ನಮಗೂ ಪದಬಳಕೆ ಚೆನ್ನಾಗಿ ಕಲಿತಿದ್ದೇವೆ. ನಾವು ಹಳ್ಳಿ ಮಕ್ಕಳೇ, ಬಳಸಬೇಕು ಅಂದರೆ ಬಳಸುತ್ತೇನೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯಗೆ ಟಾಂಗ್ ನೀಡಿದರು.