ರಾಯಚೂರು: ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮೀಯ 348ನೇ ಆರಾಧನಾ ಮಹೋತ್ಸವವನ್ನು ಅಗಸ್ಟ್ 15ರಿಂದ ಏಳು ದಿನಗಳ ಕಾಲ ನಡೆಯಲಿದೆ ಎಂದು ಮಠದ ಪೀಠಾಧಿಪತಿ ಶ್ರೀ ಸುಬುದೇಂಧ್ರ ತೀರ್ಥರು ಹೇಳಿದ್ದಾರೆ.
ಶ್ರೀರಾಘವೇಂದ್ರ ಸ್ವಾಮಿ 348ನೇ ಆರಾಧನಾ ಮಹೋತ್ಸವ ಅಗಸ್ಟ್ 15ರಿಂದ ಆರಂಭ.. - ಉತ್ತರ ಕರ್ನಾಟಕ ಭಾಗದಲ್ಲಿ ನೆರೆ
ಮಂತ್ರಾಲಯದ ರಾಯರ ಮಠದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶ್ರೀ ಸುಬುದೇಂಧ್ರ ತೀರ್ಥರು, 2019 ಅಗಸ್ಟ್14 ರಿಂದ 20ನೇ ತಾರೀಕಿನವರೆಗೆ ರಾಯರ ಆರಾಧನೆ ನಡೆಯಲಿದೆ. ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ನೆರೆ ಹಾವಳಿಗೆ ಶ್ರೀಮಠದಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ 10 ಲಕ್ಷ ರೂಪಾಯಿ ಪರಿಹಾರ ನೆರವು ನೀಡಲಾಗುವುದು ಎಂದು ಇದೇ ವೇಳೆ ತಿಳಿಸಿದ್ರು.
ಮಂತ್ರಾಲಯದ ರಾಯರ ಮಠದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 2019ರ ಅಗಸ್ಟ್ 14ರಿಂದ 20ನೇ ತಾರೀಕಿನವರೆಗೆ ರಾಯರ ಆರಾಧನೆ ನಡೆಯಲಿದೆ. 16, 17, 18ರಂದು ಮೂರು ದಿನಗಳ ಕಾಲ ಪೂರ್ವಾರಾಧನೆ, ಮಧ್ಯಾರಾಧನೆ, ಉತ್ತಾರಾಧನೆ ನಡೆಯಲಿದ್ದು, ಸಂಜೆ ವೇಳೆ ವಿವಿಧ ಸಾಂಸ್ಕೃತಿ ಕಾರ್ಯಕ್ರಮಗಳು ನಡೆಯಲಿವೆ.
ಇದೇ ವೇಳೆ ಸಾಮಾಜಿಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮೂವರಿಗೆ ರಾಯರ ಅನುಗ್ರಹ ಪ್ರಶಸ್ತಿ ನೀಡಲಾಗುವುದು ಎಂದು ತಿಳಿಸಿದ್ರು. ಉತ್ತರ ಕರ್ನಾಟಕ ಭಾಗದಲ್ಲಿ ನೆರೆ ಹಾವಳಿಗೆ ಶ್ರೀಮಠದಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ 10 ಲಕ್ಷ ರೂಪಾಯಿ ನೆರವು ನೀಡಲಾಗುವುದು. ಜೊತೆಗೆ ಶಾಖಾ ಮಠಗಳಿಂದ ಪ್ರವಾಹ ಸಂತ್ರಸ್ತರಿಗೆ ಆಹಾರ, ಧಾನ್ಯ ವಿತರಣೆ ಮಾಡಲಾಗುವುದು. ಚಾರ್ತುಮಾಸ ವ್ರತ ಮುಗಿದ ಬಳಿಕ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಲಾಗುವುದು ಎಂದು ತಿಳಿಸಿದ್ರು.