ಕರ್ನಾಟಕ

karnataka

ETV Bharat / state

ಶ್ರಾವಣ ಮಾಸದ ಧಾರ್ಮಿಕ ಕಾರ್ಯಕ್ರಮಗಳಿಗೆ ಕೊರೊನಾ ವಿಘ್ನ - ರಾಯಚೂರು ಜಿಲ್ಲಾ ಸುದ್ದಿ

ಶ್ರಾವಣ ಮಾಸ ಬಂತು ಎಂದರೆ ಸಾಕು ದೇವಾಲಯ, ಮಠಗಳಲ್ಲಿ ಹರಿಕತೆ, ಪುರಾಣ, ಪ್ರವಚನ, ಧಾರ್ಮಿಕರ ಕಾರ್ಯಕ್ರಮಗಳು ಸಾಲು ಸಾಲಾಗಿ ನಡೆಯುತ್ತವೆ. ಆದ್ರೆ ಈ ಬಾರಿ ಅವುಗಳೆಲ್ಲವೂ ರದ್ದಾಗುವ ಸಂಭವವಿದೆ. ಕೋವಿಡ್​ ಕಾಟಕ್ಕೆ ಶ್ರಾವಣ ತಿಂಗಳಲ್ಲಿ ಮಠ ಮಂದಿರಗಳು ನಿಶಬ್ಧವಾಗುವ ಸೂಚನೆಯನ್ನು ರಾಯಚೂರು ಜಿಲ್ಲಾಧಿಕಾರಿಗಳು ನೀಡಿದ್ದಾರೆ.

shravana-religious-programs-canceled-in-raichuru
ಕಲಮ್ಮಲ ಶ್ರೀಕರಿಯಪ್ಪ ತಾತಾ ಜಾತ್ರ ಮಹೋತ್ಸವ

By

Published : Jul 17, 2020, 8:46 PM IST

ರಾಯಚೂರು : ಶ್ರಾವಣಮಾಸದಲ್ಲಿ ತಿಂಗಳ ಕಾಲ ದೇವಾಲಯಗಳು, ಮಠಗಳಲ್ಲಿ ಪುರಾಣ, ಪ್ರವಚನ, ಸಾಂಸ್ಕೃತಿಕ ಹಾಗು ಧಾರ್ಮಿಕ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಆದ್ರೆ ಬಾರಿ ಕೊರೊನಾ ಕಂಟಕದಿಂದ ಧಾರ್ಮಿಕ ಕಾರ್ಯಕ್ರಮಗಳು ರದ್ದಾಗುವ ಸಾಧ್ಯತೆಯಿದೆ.

ಕೋವಿಡ್ ಕಂಟಕಪ್ರಾಯವಾಗಿ ಜನರನ್ನು ಕಾಡುತ್ತಿದ್ದು, ಸೋಂಕಿನ ನಿಯಂತ್ರಣಕ್ಕಾಗಿ ಸರ್ಕಾರ, ಜನ ಗುಂಪು ಗುಂಪಾಗಿ ಸೇರುವಂತಹ ಕಾರ್ಯಕ್ರಮಗಳನ್ನ ರದ್ದುಪಡಿಸಿದೆ. ಇದೀಗ ಕೆಲ ದಿನಗಳಲ್ಲಿ ಶ್ರಾವಣಮಾಸ ಆರಂಭವಾಗಲಿದ್ದು, ದೇಗುಲಗಳು, ಮಠಗಳಲ್ಲಿ ವಿಶೇಷ ಪೂಜೆ ಪುನಸ್ಕಾರಗಳು, ಪುರಾಣ, ಪ್ರವಚನದಂತಹ ಧಾರ್ಮಿಕ ಸಮಾರಂಭಗಳು ಪ್ರತಿ ವರ್ಷ ನಡೆಯುತ್ತಿರುತ್ತವೆ.

ಶ್ರಾವಣ ಮಾಸದ ಧಾರ್ಮಿಕ ಕಾರ್ಯಕ್ರಮಗಳಿಗೆ ಕೊರೊನಾ ವಿಘ್ನ

ಆದ್ರೆ ಈ ಬಾರಿ ಧಾರ್ಮಿಕರ ಕಾರ್ಯಕ್ರಮಗಳನ್ನು ರದ್ದುಗೊಳಿಸುವ ಸಾಧ್ಯತೆಯಿದೆ. ಹೀಗಾಗಿ ರಾಯಚೂರು ಜಿಲ್ಲೆಯ ಧಾರ್ಮಿಕ ದತ್ತಿ, ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಬರುವಂತಹ ಶ್ರೀಸೂಗೂರೇಶ್ವರ ದೇವಾಲಯದಲ್ಲಿ ನಡೆಯುವ ಪುರಾಣ ಕಾರ್ಯಕ್ರಮವನ್ನ ರದ್ದುಪಡಿಸಲಾಗಿದೆ.

ಧಾರ್ಮಿಕ ದತ್ತಿ ಮತ್ತು ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡುವಂತಹ ದೇವಾಲಯಗಳು ರಾಯಚೂರು ಜಿಲ್ಲೆಯಲ್ಲಿ ಇವೆ. ಅದರಲ್ಲಿ ಎ ದರ್ಜೆಯ ದೇವಾಲಯಗಳು-4, ಬಿ ದರ್ಜೆ-1, ಸಿ ದರ್ಜೆ 1, ಹಾಗು ಸುಮಾರು 1300ಕ್ಕೂ ಹೆಚ್ಚು ದೇವಾಲಯಗಳಿವೆ. ಈ ದೇವಾಲಯಗಳ ಪೈಕಿ ಎ ದರ್ಜೆ ದೇವಾಲಯಗಳಲ್ಲಿ ಶ್ರಾವಣಮಾಸ ವೇಳೆಯಲ್ಲಿ ಪುರಾಣ, ಪ್ರವಚನ, ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗುತ್ತಿತ್ತು. ಅದರಲ್ಲಿ ಅಪಾರ ಭಕ್ತರು ಭಾಗಿಯಾಗುತ್ತಿದ್ದರು.

ಧಾರ್ಮಿಕ ಕಾರ್ಯಕ್ರಮಗಳು ರದ್ದತಿ ಬಗ್ಗೆ ಸೂಚನೆ

ಆದ್ರೆ, ಕೊರೊನಾ ಸೋಂಕು ಹರಡುವ ಭೀತಿಯಿಂದಾಗಿ, ಜನ ಸೇರುವಂತಹ ಕಾರ್ಯಕ್ರಮಕ್ಕೆ ಅವಕಾಶವಿಲ್ಲ. ಹೀಗಾಗಿ ಶ್ರಾವಣ ಮಾಸದಲ್ಲಿ ಹೆಚ್ಚು ಜನ ಸೇರುವಂತಹ ಕಾರ್ಯಕ್ರಮ ನಡೆಸದಂತೆ ಕ್ರಮ ಕೈಗೊಳ್ಳಲು ನಿರ್ದೇಶನ ನೀಡುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲೆಯ ಶ್ರಾವಣಮಾಸದ ಮೊದಲ ಸೋಮವಾರದಂದು ನಡೆಯುವಂತಹ ಇತಿಹಾಸ ಪ್ರಸಿದ್ಧ ಕಲಮ್ಮಲ ಶ್ರೀಕರಿಯಪ್ಪ ತಾತಾ ಜಾತ್ರ ಮಹೋತ್ಸವವನ್ನು ರದ್ದುಗೊಳಿಸಲಾಗಿದೆ. ಅಲ್ಲದೇ ದೇವಸೂಗೂರಿನ ಶ್ರೀಸೂಗೂರೇಶ್ವರ ದೇವಾಲಯದಲ್ಲಿ ಪ್ರತಿ ವರ್ಷ ಹಮ್ಮಿಕೊಳ್ಳುವ ಪುರಾಣ ಕಾರ್ಯಕ್ರಮವನ್ನು ರದ್ದುಪಡಿಸಲಾಗಿದೆ.

ABOUT THE AUTHOR

...view details