ರಾಯಚೂರು:ನಿಯಮ ಉಲ್ಲಂಘಿಸಿದ ಸುಮಾರು 9 ಅಂಗಡಿಗಳನ್ನ ಮಾನವಿ ಪುರಸಭೆ ಅಧಿಕಾರಿಗಳು ಸೀಜ್ ಮಾಡಿದ್ದಾರೆ.
ನಿಯಮ ಉಲ್ಲಂಘಿಸಿದ ಅಂಗಡಿಗಳು ಸೀಜ್: ಪುರಸಭೆ ಅಧಿಕಾರಿಗಳಿಂದ ಕ್ರಮ
ಜಿಲ್ಲೆಯ ಮಾನ್ವಿ ಪಟ್ಟಣದ ಅವಶ್ಯಕ ವಸ್ತುಗಳ ಪೂರೈಕೆಗೆ ವಿನಾಯಿತಿ ನೀಡುವ ಮೂಲಕ ಸಮಯ ನಿಗದಿ ಮಾಡಲಾಗಿದೆ. ಆದ್ರೆ, ನಿಯಮ ಉಲ್ಲಂಘಿಸಿದ ಅಂಗಡಿಗಳನ್ನ ಮಾನ್ವಿ ಪುರಸಭೆ ಅಧಿಕಾರಿಗಳು ಸೀಜ್ ಮಾಡಿದ್ದಾರೆ.
seize
ಜಿಲ್ಲೆಯ ಮಾನ್ವಿ ಪಟ್ಟಣದ ಅವಶ್ಯಕ ವಸ್ತುಗಳ ಪೂರೈಕೆಗೆ ವಿನಾಯಿತಿ ನೀಡುವ ಮೂಲಕ ಸಮಯ ನಿಗದಿ ಮಾಡಲಾಗಿದೆ. ಆದ್ರೆ ಮಾನವಿ ಪಟ್ಟಣದಲ್ಲಿನ ಬಟ್ಟೆ ಅಂಗಡಿ, ಹಾರ್ಡ್‌ವೇರ್ ಶಾಪ್, ಚಿಕನ್ ಸೇಂಟರ್ ಸೇರಿದಂತೆ 9 ಅಂಗಡಿಗಳನ್ನ ಪುರಸಭೆ ಅಧಿಕಾರಿಗಳಿ ಸೀಜ್ ಮಾಡಿ ದಂಡ ವಿಧಿಸಿದ್ದಾರೆ.
ಲಾಕ್‌ಡೌನ್ ಹಿನ್ನೆಲೆಯಲ್ಲಿ ಮಾನ್ವಿ ಪಟ್ಟಣದಲ್ಲಿ ಜನರ ಅವಶ್ಯಕ ವಸ್ತುಗಳ ಖರೀದಿಗೆ ಬೆಳಗ್ಗೆ 11 ಗಂಟೆಯವರಿಗೆ ಅವಕಾಶ ಕಲ್ಪಿಸಿದ್ದಾರೆ. ಆದ್ರೆ ನಿಯಮ ಪಾಲನೆ ಮಾಡದೇ ಅಂಗಡಿಗಳನ್ನ ತೆಗೆಯಲಾಗಿದ್ದ ಸೀಜ್ ಮಾಡಿ, ದಂಡ ವಿಧಿಸುವ ಮೂಲಕ ಅಧಿಕಾರಿಗಳು ಬಿಸಿ ಮುಟ್ಟಿಸಿದ್ರು.