ರಾಯಚೂರು: ಬಸನಗೌಡ ಪಾಟೀಲ್ ಯತ್ನಾಳ್ ಅವರು ಸರ್ಕಾರ ಮತ್ತು ಸಿಎಂ ಯಡಿಯೂರಪ್ಪನವರ ವಿರುದ್ಧ ಹೇಳಿಕೆಗಳನ್ನು ನೀಡುವುದು ಸೂಕ್ತವಲ್ಲ. ಮುಂದಿನ ದಿನಗಳಲ್ಲಿ ಹೀಗೆ ಮಾತನಾಡಿ ನೋಡಲಿ, ಏನು ಆಗುತ್ತದೆ ಅಂತಾ ಗೊತ್ತಾಗಲಿದೆ ಎಂದು ಬಿಜೆಪಿ ಶಾಸಕ ಡಾ.ಶಿವರಾಜ್ ಪಾಟೀಲ್ ಹೇಳಿದರು.
ನಮ್ಮದು ಶಿಸ್ತಿನ ಪಕ್ಷ.. ಯತ್ನಾಳ್ ವಿರುದ್ಧ ಶಿವರಾಜ್ ಪಾಟೀಲ್ ವಾಗ್ದಾಳಿ - Shivraj Patil news
ನಮ್ಮದು ಶಿಸ್ತಿನ ಪಕ್ಷ, ಯತ್ನಾಳ್ ಅವರಿಗೆ ಈಗಾಗಲೇ ಪಕ್ಷ ನೋಟಿಸ್ ನೀಡಿದೆ. ಪದೇಪದೆ ಪಕ್ಷದ ವಿರುದ್ಧ ಯಾಕೆ ಈ ರೀತಿ ಮಾತನಾಡುತ್ತಾರೆ ಎನ್ನುವುದು ಗೊತ್ತಿಲ್ಲ. ಯತ್ನಾಳ್ ಒಬ್ಬರು ಮಾತನಾಡಿದ್ರೆ ಏನೂ ಆಗುವುದಿಲ್ಲ, ನಮ್ಮ ಪಕ್ಷಕ್ಕೆ ಯಾವುದೇ ತೊಂದರೆಯಿಲ್ಲ..
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮದು ಶಿಸ್ತಿನ ಪಕ್ಷ, ಯತ್ನಾಳ್ ಅವರಿಗೆ ಈಗಾಗಲೇ ಪಕ್ಷ ನೋಟಿಸ್ ನೀಡಿದೆ. ಪದೇಪದೆ ಪಕ್ಷದ ವಿರುದ್ಧ ಯಾಕೆ ಈ ರೀತಿ ಮಾತನಾಡುತ್ತಾರೆ ಎನ್ನುವುದು ಗೊತ್ತಿಲ್ಲ. ಯತ್ನಾಳ್ ಒಬ್ಬರು ಮಾತನಾಡಿದ್ರೆ ಏನೂ ಆಗುವುದಿಲ್ಲ, ನಮ್ಮ ಪಕ್ಷಕ್ಕೆ ಯಾವುದೇ ತೊಂದರೆಯಿಲ್ಲ ಎಂದರು.
ಇನ್ನು, ಬಿಪಿಎಲ್ ಕಾರ್ಡ್‌ಗೆ ಟಿವಿ, ಫ್ರಿಡ್ಜ್, ಬೈಕ್ ಮಾನದಂಡವಾಗಬಾರದು. ಈ ವಿಷಯವನ್ನು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ನನಗೆ ಅದರ ಬಗ್ಗೆ ಸಮಗ್ರ ಮಾಹಿತಿಯಿಲ್ಲ. ಬೈಕ್, ಟಿವಿಗಳು ಇಂದಿನ ದಿನಗಳಲ್ಲಿ ಕೇವಲ ವಿಲಾಸಿ ವಸ್ತುಗಳಾಗಿ ಉಳಿದಿಲ್ಲ. ಇದಕ್ಕೆ ನನ್ನ ವಿರೋಧವಿದೆ ಎಂದರು.