ಲಿಂಗಸುಗೂರು: ಕೃಷ್ಣಾ ಪ್ರವಾಹದಿಂದ ಮುಳುಗಡೆ ಆಗಿದ್ದ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಶೀಲಹಳ್ಳಿ ಸೇತುವೆ ಸಂಚಾರಕ್ಕೆ ಮುಕ್ತವಾಗಿದೆ.
ಲಿಂಗಸುಗೂರು: ವಾರದ ಬಳಿಕ ಶೀಲಹಳ್ಳಿ ಸೇತುವೆ ಸಂಚಾರಕ್ಕೆ ಮುಕ್ತ - Narayanapura dam news
ಒಂದು ವಾರದಿಂದ ಮುಳುಗಡೆಯಾಗಿದ್ದ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಶೀಲಹಳ್ಳಿ ಸೇತುವೆ ಇದೀಗ ಸಂಚಾರಕ್ಕೆ ಮುಕ್ತವಾಗಿದೆ.
![ಲಿಂಗಸುಗೂರು: ವಾರದ ಬಳಿಕ ಶೀಲಹಳ್ಳಿ ಸೇತುವೆ ಸಂಚಾರಕ್ಕೆ ಮುಕ್ತ Sheelahalli bridge](https://etvbharatimages.akamaized.net/etvbharat/prod-images/768-512-11:01:35:1598160695-kn-lgs-02-sheelahalli-bridge-kac10020-23082020104928-2308f-1598159968-433.jpg)
Sheelahalli bridge
ಒಂದು ವಾರದಿಂದ ನಾರಾಯಣಪುರ ಅಣೆಕಟ್ಟೆ ಮೂಲಕ ಕೃಷ್ಣಾ ನದಿಗೆ ಭಾರಿ ಪ್ರಮಾಣದ ನೀರು ಹರಿಬಿಟ್ಟಿದ್ದರಿಂದ ಸೇತುವೆ ಮುಳುಗಡೆ ಆಗಿತ್ತು. ನಾರಾಯಣಪುರ ಅಣೆಕಟ್ಟೆ ನೀರಿನ ಮಟ್ಟ 490.590 ಮೀಟರ್ ಕಾಯ್ದುಕೊಂಡು ಹೆಚ್ಚುವರಿ 1,27,680 ಕ್ಯುಸೆಕ್ ನೀರು ಹರಿಸಲಾಗುತ್ತಿದೆ ಎಂದು ಅಣೆಕಟ್ಟೆ ಎಂಜಿನಿಯರ್ ವಿಜಯಕುಮಾರ ಹಳ್ಳಿ ತಿಳಿಸಿದ್ದಾರೆ.