ರಾಯಚೂರು:ಕೊರೊನಾದಿಂದ ಪೋಷಕರ ಸಾವಿನ ಬಳಿಕ ಅನಾಥವಾಗಿರುವ ಮಕ್ಕಳ ಜತೆಯಲ್ಲಿ ವಿಡಿಯೋ ಸಂವಾದ ನಡೆಸಿದ್ದೇನೆ ಎಂದು ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.
ರಾಯಚೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೊರೊನಾ ಮೂರನೇ ಅಲೆ ಆತಂಕ ಇರುವುದರಿಂದ ಆರು ಜಿಲ್ಲೆಯಲ್ಲಿ ಪ್ರವಾಸ ಮಾಡಿದ್ದೇನೆ. ಅನಾಥ ಮಕ್ಕಳ ಜತೆ ವಿಡಿಯೋ ಸಂವಾದ ಕೂಡ ಮಾಡಿದ್ದೇನೆಂದು ತಿಳಿಸಿದರು.
ರಾಜ್ಯದಲ್ಲಿ ಅನೇಕ ಮಧ್ಯಮ ವರ್ಗದ, ಬಡವರ ಮಕ್ಕಳು ಅನಾಥವಾಗಿದ್ದಾರೆ. ಸದ್ಯ 31 ಮಕ್ಕಳು ಸಂಬಂಧಿಕರ ಪೋಷಣೆಯಲ್ಲಿದ್ದಾರೆ. ಮಕ್ಕಳನ್ನು ನೋಡಿಕೊಳ್ಳುವವರು ಇಲ್ಲವೆಂದರೆ ಅನಾಥ ಮಕ್ಕಳನ್ನು ದತ್ತು ಸ್ವೀಕಾರ ಕೇಂದ್ರಕ್ಕೆ ಶಿಫ್ಟ್ ಮಾಡಲಾಗುವುದು. ಅನಾಥ ಮಕ್ಕಳ ಎಲ್ಲ ಜವಾಬ್ದಾರಿಯನ್ನು ನಮ್ಮ ಇಲಾಖೆ ವಹಿಸಲಿದೆ ಎಂದರು. ಕೋವಿಡ್ ನಂತರ ಮಕ್ಕಳಿಗೆ ಕೆಲವು ತೊಂದರೆ ಕಾಣಿಸಿಕೊಂಡಿದೆ. ಈ ಕುರಿತು ಆರೋಗ್ಯ ಸಚಿವರ ಜತೆಗೆ ಚರ್ಚೆ ನಡೆಸಿದ್ದೇನೆ. ಮಕ್ಕಳ ಚಿಕಿತ್ಸೆಗೆ ಬೇಕಾದ ಔಷಧಿ ಸೇರಿದಂತೆ ಇತರೆ ಸಿದ್ಧತೆ ಮಾಡಿಕೊಂಡಿದ್ದು, ರಾಜ್ಯದಲ್ಲಿ ಮಕ್ಕಳಿಗೆ ಬೇಕಾದ ಔಷಧಿಯಲ್ಲಿ ಏನೂ ಕೊರತೆ ಇಲ್ಲ ಎಂದು ಹೇಳಿದರು.
ಇದನ್ನೂ ಓದಿ:ಇಂಟರ್ನೆಟ್ ಸಮಸ್ಯೆ.. ಗುಡ್ಡ, ಕಾಡಿನಲ್ಲಿಯೇ ಆನ್ಲೈನ್ ಕ್ಲಾಸ್, ವರ್ಕ್ ಫ್ರಂ ಹೋಂ!