ಕರ್ನಾಟಕ

karnataka

ETV Bharat / state

ಕೆಲಸದ ವೇಳೆ ಮಹಿಳಾ ಸಿಬ್ಬಂದಿ ಮೇಲೆ ಲೈಂಗಿಕ ದೌರ್ಜನ್ಯ : ಬ್ಯಾಂಕ್​​ ಮ್ಯಾನೇಜರ್​​ ಬಂಧನ - undefined

ಬ್ಯಾಂಕ್‌ನಲ್ಲಿ ಕೆಲಸದ ವೇಳೆ ಮಹಿಳಾ ಸಿಬ್ಬಂದಿಗೆ, ಲೈಂಗಿಕ ದೌರ್ಜನ್ಯವೆಸಗಿದ ಆರೋಪದಡಿ ರಾಯಚೂರು ಜಿಲ್ಲಾ ಕೇಂದ್ರ ಸಹಕಾರಿ(ಆರ್‌ಡಿಸಿಸಿ) ಬ್ಯಾಂಕ್‌ನ ಜನರಲ್ ಮ್ಯಾನೇಜರ್‌ನ್ನು ಬಂಧಿಸಲಾಗಿದೆ.

ಕೆಲಸದ ವೇಳೆ ಮಹಿಳಾ ಸಿಬ್ಬಂದಿ ಮೇಲೆ ಲೈಂಗಿಕ ದೌರ್ಜನ್ಯ

By

Published : Jun 20, 2019, 3:44 AM IST

ರಾಯಚೂರು: ಲೈಂಗಿಕ ದೌರ್ಜನ್ಯವೆಸಗಿದ ಆರೋಪದಡಿ ರಾಯಚೂರು ಜಿಲ್ಲಾ ಕೇಂದ್ರ ಸಹಕಾರಿ(ಆರ್‌ಡಿಸಿಸಿ) ಬ್ಯಾಂಕ್‌ನ ಜನರಲ್ ಮ್ಯಾನೇಜರ್‌ನ್ನು ಬಂಧಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಜನರಲ್ ಮ್ಯಾನೇಜರ್ ಬಿ. ಶ್ರೀಕಾಂತ್ ಬಂಧಿತ ಆರೋಪಿ. ಬ್ಯಾಂಕ್‌ನಲ್ಲಿ ಈತ ಕೆಲಸದ ವೇಳೆ ಮಹಿಳಾ ಸಿಬ್ಬಂದಿಗೆ ಕಡತ ಹುಡುಕಿ ಕೊಡುವಂತೆ ಹೇಳಿದ್ದಾನೆ. ಆಗ ಕಡತ ಹುಡುಕಲು ಹೋದ ಮಹಿಳಾ ಸಿಬ್ಬಂದಿಗೆ ಹಿಂಬದಿಯಿಂದ ಹೋಗಿ ದೌರ್ಜನ್ಯವೆಸಗುವ ಮೂಲಕ ಕೆನ್ನೆಗೆ ಮುತ್ತು ನೀಡಿ ಅಪಮಾನಗೊಳಿಸಿದ್ದಾನೆ.

ಈ ವಿಚಾರವನ್ನ ಆರ್‌ಡಿಸಿಸಿ ಬ್ಯಾಂಕ್‌ನ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದ್ರೆ ಮ್ಯಾನೇಜರ್ ವಿರುದ್ದ ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ ನೊಂದ ಮಹಿಳೆ, ರಾಯಚೂರಿನ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಯನ್ನ ಬಂಧಿಸಿ ವಶಕ್ಕೆ ಪಡೆದು, ಐಪಿಸಿ 354 ಕಲಂ ನಡಿ ಮೊಕದ್ದಮೆ ದಾಖಲಿಸಿ, ತನಿಖೆ ಕೈಗೊಂಡಿದ್ದಾರೆ. ಈ ಬಗ್ಗೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎಫ್​ಐಆರ್​ ಕಾಪಿ

For All Latest Updates

TAGGED:

ABOUT THE AUTHOR

...view details