ರಾಯಚೂರು:ಮಾನವಿ ತಹಶೀಲ್ದಾರ್ ಅಮರೇಶ್ ಬಿರಾದಾರ್ ಅವರು ಶಿರಸ್ತೇದಾರರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಆರ್. ವೆಂಕಟೇಶ್ ಕುಮಾರ್ ಆದೇಶ ಹೊರಡಿಸಿದ್ದಾರೆ.
ಶಿರಸ್ತೇದಾರರಿಗೆ ಲೈಂಗಿಕ ಕಿರುಕುಳ ಆರೋಪ: ತಹಶೀಲ್ದಾರ್ ವಿರುದ್ಧ ತನಿಖೆಗೆ ರಾಯಚೂರು ಡಿಸಿ ಆದೇಶ - Raichuru latest News
ರಾಯಚೂರಿನ ಮಾನವಿ ತಾಲೂಕಿನ ತಹಶೀಲ್ದಾರ್ ಅಮರೇಶ್ ಬಿರಾದಾರ್ ಅವರು ಶಿರಸ್ತೇದಾರರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ದೂರು ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಬೇಕು ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶ್ ಕುಮಾರ್ ಆದೇಶ ಹೊರಡಿಸಿದ್ದಾರೆ.
ಮಾನವಿ ತಹಶೀಲ್ದಾರ್ ಅಮರೇಶ್ ಬಿರಾದಾರ್ ಕಚೇರಿಯ ಶಿರಸ್ತೇದಾರಿರಗೆ ಕೆಲಸ ಮಾಡುವ ಸ್ಥಳದಲ್ಲಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಸಿಡಿಯೊಂದಿಗೆ ದೂರು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ದೂರನ್ನು ಆಧರಿಸಿ ಸಮಿತಿಯ ವಿಚಾರಣೆ ನಡೆಸುವ ಮೂಲಕ ವರದಿಯನ್ನ ಸಲ್ಲಿಸುವಂತೆ ಲೈಂಗಿಕ ಕಿರುಕುಳ ದೂರು ನಿವಾರಣಾ ಸಮಿತಿ ಅಧ್ಯಕ್ಷೆ ಆರ್.ಇಂದಿರಾ ಅವರಿಗೆ ಸೂಚಿಸಲಾಗಿದೆ.
ಕಾರ್ಯಸ್ಥಳದಲ್ಲಿನ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ (ತಡೆ, ನಿಷೇಧ, ಪರಿಹಾರ) ಕಾಯ್ದೆ 2015ರ ಅನ್ವಯ ಸಮಿತಿ ಮೂಲಕ ವಿಚಾರಣೆ ನಡೆಸಿ, ಶೀಘ್ರ ವರದಿಯನ್ನ ಸಲ್ಲಿಸುವಂತೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.