ರಾಯಚೂರು: ರಾತ್ರಿ ವೇಳೆ ಶೆಟರ್ ಬೀಗ ಮುರಿದು ಸರಣಿ ಅಂಗಡಿಗಳನ್ನು ಕಳ್ಳತನ ಮಾಡಿರುವ ಘಟನೆ ಜಿಲ್ಲೆಯ ಸಿರವಾರ ಪಟ್ಟಣದಲ್ಲಿ ನಡೆದಿದೆ.
ಸಿರವಾರದಲ್ಲಿ ಸರಣಿ ಕಳ್ಳತನ... ಲಕ್ಷಾಂತರ ನಗದು ಕಳವು - ನಗದು
ರಾತ್ರಿ ವೇಳೆ ಶೆಟರ್ ಬೀಗ ಮುರಿದು ಸರಣಿ ಅಂಗಡಿಗಳನ್ನು ಕಳ್ಳತನ ಮಾಡಿರುವ ಘಟನೆ ರಾಯಚೂರು ಜಿಲ್ಲೆಯ ಸಿರವಾರ ಪಟ್ಟಣದಲ್ಲಿ ನಡೆದಿದೆ.
ಸಿರವಾರದಲ್ಲಿ ಸರಣಿ ಕಳ್ಳತನ
ಸಂತೋಷ್ ವೈನ್ಸ್, ಸೀಮಾ ಬಾರ್, ನಂದಿನಿ ಬಾರ್ ಆ್ಯಂಡ್ ರೆಸ್ಟೊರೆಂಟ್, ಮಹಾಲಕ್ಷ್ಮಿ ಕಿರಾಣಿ ಅಂಗಡಿ, ಎಂ.ಆರ್.ಎಫ್ ಅಂಗಡಿ, ಜಿಯೊ ಮೊಬೈಲ್ ಶಾಪ್, ಮೆಡಿಕಲ್ ಪಾನ್ ಶಾಪ್ ಸೇರಿದಂತೆ ಸುಮಾರು ಏಳೆಂಟು ಸಣ್ಣ ಅಂಗಡಿಗಳನ್ನು ಖದೀಮರು ಬೀಗ ಮುರಿದು ಲಕ್ಷಾಂತರ ರೂಪಾಯಿ ಕದ್ದಿದ್ದಾರೆ ಎಂದು ತಿಳಿದುಬಂದಿದೆ.
ಸ್ಥಳಕ್ಕೆ ಸಿರವಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.