ರಾಯಚೂರು :ಜಿಲ್ಲೆಯ ಖ್ಯಾತ ಹಾಗೂ ಹಿರಿಯ ವಕೀಲ ಮರಿಬಸವನಗೌಡ ನಿಧನರಾಗಿದ್ದಾರೆ.
ವಕೀಲರಾಗಿ ವೃತ್ತಿ ಆರಂಭಿಸಿದ್ದವರು, ಸೂಕ್ಷ್ಮ ಹಾಗೂ ತೀಕ್ಷ್ಣವಾದ ಪ್ರಕರಣಗಳಲ್ಲಿ ವಾದ ಮಂಡಿಸುವಲ್ಲಿ ನೈಪುಣ್ಯತೆ ಹೊಂದಿದ್ದರು. ಹಲವು ಯುವ ವಕೀಲರು ಇವರಿಂದ ಮಾರ್ಗದರ್ಶನ ಪಡೆದುಕೊಂಡು ವೃತ್ತಿ ನಡೆಸುತ್ತಿದ್ದಾರೆ. ಅಲ್ಲದೆ ಜಿಲ್ಲೆಯ ಖ್ಯಾತ ನ್ಯಾಯವಾದಿ ಎಂಬ ಹೆಗ್ಗಳಿಕೆ ಇವರದ್ದಾಗಿತ್ತು. ವಯೋ ಸಹಜವಾಗಿ ನಿನ್ನೆ ಸಂಜೆ ಇಹಲೋಕ ತ್ಯಜಿಸಿದ್ದಾರೆ.