ಕರ್ನಾಟಕ

karnataka

ETV Bharat / state

ಭದ್ರತಾ ಲೋಪ: ಇಬ್ಬರು ಪೊಲೀಸ್​​ ಅಧಿಕಾರಿಗಳ ಅಮಾನತು - PSI Suspend

ಸಿಎಂ ಗ್ರಾಮ ವಾಸ್ತವ್ಯಕ್ಕೆಂದು ಬಂದಾಗ ಭದ್ರತಾ ಲೋಪ ಎಸಗಿದ್ದಾರೆ ಎಂದು ಇಬ್ಬರು ಪೊಲೀಸ್​ ಅಧಿಕಾರಿಗಳನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

ಪೊಲೀಸ್ ಅಧಿಕಾರಗಳ ತಲೆದಂಡ

By

Published : Jun 28, 2019, 10:50 PM IST

Updated : Jun 29, 2019, 1:03 AM IST

ರಾಯಚೂರು: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಗ್ರಾಮ ವಾಸ್ತವ್ಯಕ್ಕೆಂದು ಬಂದಾಗ ಭದ್ರತಾ ಲೋಪವೆಸಗಿದ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಯರಗೇರಾ ಸಿಪಿಐ ದತ್ತಾತ್ರೇಯ, ರಾಯಚೂರು ಗ್ರಾಮೀಣ ಠಾಣೆ ಪಿಎಸ್‌ಐ ನಿಂಗಪ್ಪ ಅಮಾನತುಗೊಂಡ ಪೊಲೀಸ್​ ಸಿಬ್ಬಂದಿ.

ನಗರದ ಹೊರವಲಯದ ಯರಮರಸ್ ವಿವಿಐಐಪಿ ಸರ್ಕಿಟ್​ ಹೌಸ್​ನಿಂದ ಸಿಎಂ ಗ್ರಾಮ ವಾಸ್ತವ್ಯ ಮಾಡಲು ಕರೇಗುಡ್ಡ ಹೋಗುತ್ತಿದ್ದಾಗ ಬಸ್​ ತಡೆದು ವೈಟಿಪಿಎಸ್ ಕಾರ್ಮಿಕರು ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರ ಮೇಲೆ ಸಿಎಂ ಗರಂ ಆಗಿದ್ದರು. ಮುಂಜಾಗ್ರತಾ ಭದ್ರತೆ ಕೈಗೊಳ್ಳಬೇಕಾದ ಪೊಲೀಸ್ ಅಧಿಕಾರಿಗಳು ಸರಿಯಾಗಿ ಜವಾಬ್ದಾರಿ ನಿಭಾಯಿಸಿದೇ ಭದ್ರತಾ ಲೋಪ ಎಸೆಗಿದ್ದಾರೆ ಎಂಬ ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಎಸ್ಪಿ ಡಾ. ಸಿ.ಬಿ.ವೇದಮೂರ್ತಿ ಅಮಾನತು ಮಾಡಿ ಆದೇಶಿಸಿದ್ದಾರೆ.

Last Updated : Jun 29, 2019, 1:03 AM IST

ABOUT THE AUTHOR

...view details