ಕರ್ನಾಟಕ

karnataka

ETV Bharat / state

ಮಸ್ಕಿ ಹಳ್ಳದಲ್ಲಿ ಕೊಚ್ಚಿ ಹೋದ ಚನ್ನಬಸಪ್ಪ: ಮುಂದುವರಿದ ಶೋಧ ಕಾರ್ಯ - ರಾಯಚೂರು ಸುದ್ದಿ

ಮಸ್ಕಿ ಹಳ್ಳದಲ್ಲಿ ಕೊಚ್ಚಿ ಹೋಗಿರುವ ಯುವಕನ ಪತ್ತೆಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಮತ್ತೊಂದೆಡೆ ರಕ್ಷಣೆ ಕಾರ್ಯ ನಡೆಸುವಾಗ ಮುಂಜಾಗ್ರತ ಕ್ರಮ ಕೈಗೊಳ್ಳದೇ ಇರುವುದರಿಂದ ಚನ್ನಬಸಪ್ಪ ನೀರಿನಲ್ಲಿ ಕೊಚ್ಚಿ ಹೋಗುವುದಕ್ಕೆ ಕಾರಣ ಎಂದು ತಾಲೂಕು ಆಡಳಿತದ ವಿರುದ್ಧ ಕುಟುಂಬಸ್ಥರು ಆರೋಪಿಸಿದ್ದಾರೆ.

search of a young man who was lost in a maski ditch
ಮಸ್ಕಿ ಹಳ್ಳದಲ್ಲಿ ಕೊಚ್ಚಿ ಹೋದ ಚನ್ನಬಸಪ್ಪ : ಮುಂದುವರೆದ ಶೋಧ ಕಾರ್ಯ

By

Published : Oct 13, 2020, 6:58 PM IST

ರಾಯಚೂರು: ಜಿಲ್ಲೆಯ ಮಸ್ಕಿ ಜಲಾಶಯದಿಂದ ಹಳ್ಳಕ್ಕೆ ನೀರು ಬೀಡಲಾಗಿತ್ತು. ಈ ವೇಳೆ, ಹಳ್ಳಕ್ಕೆ ಬಹಿರ್ದೆಸೆಗೆ ತೆರಳಿದಾಗ ಚನ್ನಬಸಪ್ಪ ಹಳ್ಳದಲ್ಲಿ ಸಿಲುಕಿಕೊಂಡಿದ್ದ. ಈತನನ್ನು ಹಗ್ಗದಿಂದ ರಕ್ಷಣೆ ಮಾಡಲು ಮುಂದಾದಾಗ ಹಗ್ಗ ತುಂಡಾಗಿ ನೀರಿನಲ್ಲಿ ಕೊಚ್ಚಿ ಕೊಂಡು ಹೋಗಿದ್ದಾನೆ.

ಮಸ್ಕಿ ಹಳ್ಳದಲ್ಲಿ ಕೊಚ್ಚಿ ಹೋದ ಚನ್ನಬಸಪ್ಪ : ಮುಂದುವರೆದ ಶೋಧ ಕಾರ್ಯ

ಅಗ್ನಿಶಾಮಕ ಸಿಬ್ಬಂದಿ, ಈಜು ಪರಿಣತರೊಂದಿಗೆ ಚನ್ನಬಸಪ್ಪ ಶೋಧ ಕಾರ್ಯ ನಡೆಸಲಾಗುತ್ತಿದೆ. ಆದ್ರೆ ಇದುವರೆಗೂ ಚನ್ನಬಸಪ್ಪ ಪತ್ತೆಯಾಗಿಲ್ಲ.

ಇತ್ತ ಚನ್ನಬಸಪ್ಪನ ಪತ್ನಿ ಹಾಗೂ ಪೋಷಕರ, ಆಕ್ರಂದನ ಮುಗಿಲು ಮುಟ್ಟಿದ್ದು, ಚನ್ನಬಸಪ್ಪನ ಹುಡುಕಿಕೊಡಿ ಎಂದು ಕುಟುಂಬಸ್ಥರು ಒತ್ತಾಯಿಸಿದ್ದಾರೆ. ರಕ್ಷಣೆ ಕಾರ್ಯ ನಡೆಸುವಾಗ ಮುಂಜಾಗ್ರತ ಕ್ರಮ ಕೈಗೊಳ್ಳದೇ ಇರುವುದರಿಂದ ಚನ್ನಬಸಪ್ಪ ನೀರಿನಲ್ಲಿ ಕೊಚ್ಚಿ ಹೋಗುವುದಕ್ಕೆ ಕಾರಣ ಎಂದು ತಾಲೂಕು ಆಡಳಿತದ ವಿರುದ್ಧ ಕುಟುಂಬಸ್ಥರು ಆರೋಪಿಸಿದ್ದಾರೆ.

ABOUT THE AUTHOR

...view details