ಕರ್ನಾಟಕ

karnataka

ETV Bharat / state

ರಾಯಚೂರಿನಲ್ಲಿ ಸರಿಗಮಪ ಖ್ಯಾತಿಯ ಮೋನಿಕಾ, ರುಬಿನಾ ಕಂಠಕ್ಕೆ ಪ್ರೇಕ್ಷಕರು ಫಿದಾ.. - ಪರಮ ಪೂಜ್ಯ ಬಸವ ಜಯಮೃತ್ಯುಂಜಯ ಸ್ವಾಮಿಗಳು

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಕಲಾ ಸಂಕುಲ ಸಂಸ್ಥೆ ವತಿಯಿಂದ ರಾಯಚೂರಿನಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಸರಿಗಮಪ ಖ್ಯಾತಿಯ ಮೋನಿಕಾ ಹಾಗೂ ರುಬಿನಾ ಹಾಡುಗಳಿಗೆ ಪ್ರೇಕ್ಷಕರು ಮನಸೋತರು.

ರಾಯಚೂರಲ್ಲಿ ಶಿಕ್ಷರ ದಿನಾಚರಣೆ ಕಾರ್ಯಕ್ರಮ

By

Published : Sep 9, 2019, 11:00 AM IST

ರಾಯಚೂರು:ಶಿಕ್ಷಕರ ದಿನಾಚರಣೆಯ ನಿಮಿತ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಕಲಾ ಸಂಕುಲ ಸಂಸ್ಥೆ ವತಿಯಿಂದ ನಗರದ ರಂಗಮಂದಿರದಲ್ಲಿ ವಿವಿಧ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಸರಿಗಮಪ ಖ್ಯಾತಿಯ ರಾಯಚೂರಿನ ದೇವದುರ್ಗ ತಾಲೂಕಿನ ಸೋಮನಮರಡಿ ಗ್ರಾಮದ ಮೋನಿಕಾ, ಹಾವೇರಿಯ ಮೇವುಂಡಿ ಗ್ರಾಮದ ರುಬಿನಾ ಅವರ ಹಾಡುಗಳಿಗೆ ಪ್ರೇಕ್ಷಕರು ಮನಸೋತರು.

ರಾಯಚೂರಿನಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ..

ಸರ್ಕಾರಿ ಶಾಲೆಯ ಬಗ್ಗೆ ಬಾಲಕಿ ರುಬಿನಾ ನಮ್ಮೂರು ಶಾಲೆ ಬೊಂಬೆ ಹೇಳುತೈತೆ ಟ್ಯೂನ್​ಗೆ ಧ್ವನಿ ಜೋಡಿಸಿ ಹಾಡಿದ ಹಾಡು ಪ್ರೇಕ್ಷರನ್ನು ರೋಮಾಂಚನಗೊಳಿಸಿತು. ಅಲ್ಲದೆ ಮೋನಿಕಾರ ಸೂಜುಗಾರ ಮೋಜು ಮಲ್ಲಿಗೆ ಹಾಡಿಗೆ ಪ್ರೇಕ್ಷಕರು ಫಿದಾ ಆದರು. ಅಲ್ಲದೇ ಉಡುಪಿಯ ಕಲಾವತಿ ಅವರ ಕಾಣದ ಕಡಲಿಗೆ ಹಾಡಿಗೆ ಕುಣಿದು ಕುಪ್ಪಳಿಸಿದರು. ವೇದಿಕೆಯ ಆಕರ್ಷಣೆಯಾದ ಈ ಬಾಲಕಿಯರಿಗೆ ಎಸ್ಪಿ ವೇದಮೂರ್ತಿ, ಗ್ರಾಮೀಣ ಶಾಸಕ ದದ್ದಲ ಬಸವನಗೌಡ, ಸಾಹಿತಿ ಕುಂ.ವಿ ವೀರಭದ್ರಪ್ಪನವರು ಅವರ ವಿದ್ಯಾಭ್ಯಾಸದ ಖರ್ಚು ನೋಡಿಕೊಳ್ಳುವುದಾಗಿ ಘೋಷಿಸಿದರು.

ಕಾರ್ಯಕ್ರಮದಲ್ಲಿ ಕೂಡಲಸಂಗಮ ಪಂಚಮಸಾಲಿ ಪೀಠದ ಪರಮ ಪೂಜ್ಯ ಬಸವ ಜಯಮೃತ್ಯುಂಜಯ ಸ್ವಾಮಿಗಳು ಆಶೀರ್ವಚನ ನೀಡಿ, ಸಮಾಜದಲ್ಲಿ ಜಾತ್ಯಾತೀತರಾಗಿ ಎಲ್ಲರಿಗೂ ಸಮಾನವಾಗಿ ನೋಡಿ ಮಕ್ಕಳನ್ನು ತಿದ್ದುವ ಕಾರ್ಯ ಮಾಡುವವರು ಏಕೈಕ ವ್ಯಕ್ತಿಗಳೆಂದರೆ ಶಿಕ್ಷಕರು. ಶಿಕ್ಷಣ ವೃತ್ತಿ ಪವಿತ್ರವಾದುದು. ಸಮಾಜದ ಬದಲಾವಣೆಗೆ ಶಿಕ್ಷಕರ ಪಾತ್ರ ದೊಡ್ಡದು. ದೇಶದ ಮೊದಲ ಶಿಕ್ಷಕಿ ಸಾವಿತ್ರಿ ಬಾಯಿಫುಲೆ, ಅವರು ಮೊದಲಿಗೆ ಸಮಾಜದ ಕಟ್ಟ ಕಡೆಯ ವ್ಯಕ್ತಿಗಳಿಗೂ ಶಿಕ್ಷಣ ದೊರೆಯಬೇಕೆಂದು ಹೋರಾಡಿದವರು, ಅವರ ಕಾರ್ಯ ಅನನ್ಯ ಎಂದು ಅಭಿಪ್ರಾಯಪಟ್ಟರು.

ಇನ್ನು ಕಾರ್ಯಕ್ರಮದಲ್ಲಿ ಗಾನಕೋಗಿಲೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅಲ್ಲದೇ ಉತ್ತಮ ಶಾಲಾ ಶಿಕ್ಷಕರು ಸೇರಿದಂತೆ ಸಮಾಜ ಸೇವೆ ಸಲ್ಲಿಸಿದ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ABOUT THE AUTHOR

...view details