ರಾಯಚೂರು: ಸಂಪೂರ್ಣ ಭಾರತ ಲಾಕ್ಡೌನ್ ಆಗಿದ್ದು, ಇದರಿಂದ ಕೂಲಿನಾಲಿ ಮಾಡಿ ಬದುಕು ನಡೆಸುತ್ತಿದ್ದ ಜನರಿಗೆ ಕೂಲಿ ಕೆಲಸವಿಲ್ಲದೆ ತುತ್ತಿನ ಚೀಲ ತುಂಬಿಸಿಕೊಳ್ಳಲು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ತಮ್ಮ ವಾರ್ಡ್ ನಿವಾಸಿಗಳಿಗೆ ಅಗತ್ಯ ವಸ್ತುಗಳ ವಿತರಿಸಲಿದ್ದಾರೆ ಸಜೀದ್ ಸಮೀರ್ - ರಾಯಚೂರು ಲೇಟೆಸ್ಟ್ ನ್ಯೂಸ್
ಭಾರತ ಲಾಕ್ಡೌನ್ ಆಗಿದ್ದು, ಕೂಲಿನಾಲಿ ಮಾಡಿ ಬದುಕು ನಡೆಡಸುತ್ತಿದ್ದ ಜನರಿಗೆ ಕೆಲಸವಿಲ್ಲದೆ ಕೆಲವರಿಗೆ ತುತ್ತಿನ ಚೀಲ ತುಂಬಿಸಿಕೊಳ್ಳಲು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. 15ನೇ ವಾರ್ಡ್ ಸದಸ್ಯ ಸಜೀದ್ ಸಮೀರ್ ತಮ್ಮ ವಾರ್ಡ್‌ನ ನಿವಾಸಿಗಳು ಆಹಾರ ಪದಾರ್ಥಗಳನ್ನು ಉಚಿತವಾಗಿ ನೀಡುತ್ತಿದ್ದಾರೆ.
ತಮ್ಮ ವಾರ್ಡ್ ನಿವಾಸಿಗಳಿಗೆ ಅಗತ್ಯ ವಸ್ತುಗಳ ಹಂಚಿಕೆ ಮಾಡಲಿದ್ದಾರೆ ಸಜೀದ್ ಸಮೀರ್
ಇದನರಿತ ನಗರದ 15ನೇ ವಾರ್ಡ್ ಸದಸ್ಯ ಸಜೀದ್ ಸಮೀರ್ ತಮ್ಮ ವಾರ್ಡ್‌ನ ನಿವಾಸಿಗಳು ಆಹಾರ ಪದಾರ್ಥಗಳನ್ನು ಉಚಿತವಾಗಿ ನೀಡುತ್ತಿದ್ದಾರೆ. ಮನೆಗೆ ಅಗತ್ಯವಿರುವ ಅಕ್ಕಿ, ತೊಗರಿ ಬೇಳೆ, ಸಾಸಿವೆ, ಜೀರಿಗಿ, ಸಕ್ಕರೆ, ಮೆಣಸಿನಕಾಯಿ ಪೌಡರ್ ಸೇರಿದಂತೆ ಅಗತ್ಯ ವಸ್ತುಗಳ ಪಟ್ಟಣವನ್ನು ಕುಟುಂಬದ ಸದಸ್ಯರೊಂದಿಗೆ ಸಿದ್ಧಪಡಿಸುತ್ತಿದ್ದಾರೆ.
ಇವುಗಳನ್ನು ತಮ್ಮ ವಾರ್ಡ್ ಬಡ ಜನರ ಮನೆ ಬಾಗಿಲಿಗೆ ತೆರಳಿ ಹಂಚಿಕೆ ಮಾಡುತ್ತಿದ್ದಾರೆ.