ರಾಯಚೂರು:ಜಿಲ್ಲೆಯಲ್ಲಿ ಗ್ರಾಮೀಣ ಭಾಗಕ್ಕೂ ಸರ್ಕಾರಿ ಮತ್ತು ಖಾಸಗಿ ಬಸ್ ಸಂಚಾರವಿದ್ದರೂ ಆಟೋ, ಜೀಪ್, ಟಂಟಂ ವಾಹನಗಳತ್ತ ಹಳ್ಳಿ ಜನತೆ ಒಲವು ತೋರುತ್ತಿದ್ದಾರೆ. ಆದರೀಗ ಆಟೋ, ಜೀಪ್ಗಳೂ ಟಿಕೆಟ್ ದರ ಏರಿಸಿ ಜನರಿಗೆ ಶಾಕ್ ನೀಡಿವೆ.
ಲಾಕ್ಡೌನ್ನಲ್ಲಿ ಸ್ಥಗಿತಗೊಂಡಿದ್ದ ಬಸ್ ಸಂಚಾರ ಅನ್ಲಾಕ್ ಬಳಿಕ ಆರಂಭವಾಯಿತು. ಆದರೆ, ಗ್ರಾಮೀಣ ಭಾಗಕ್ಕೆ ಬಸ್ ಸಂಚಾರ ಬಿಟ್ಟಿರಲಿಲ್ಲ. ಹೀಗಾಗಿ, ಹಳ್ಳಿ ಜನರು ಆಟೋ, ಜೀಪ್ಗಳನ್ನೇ ಹೆಚ್ಚು ಬಳಸುತ್ತಿದ್ದರು. ಅವುಗಳನ್ನೇ ಈಗಲೂ ಮುಂದುವರೆಸಿದ್ದಾರೆ.
ಇದನ್ನೂ ಓದಿ...ಆರನೇ ದಿನ ಸ್ವಲ್ಪ ಚೇತರಿಕೆಯಾದ ಲಕ್ಷ್ಮಿ ವಿಲಾಸ್ ಬ್ಯಾಂಕ್ ಷೇರುಗಳ ಪ್ರಮಾಣ
ಸರ್ಕಾರ ಆದೇಶದ ಬಳಿಕ ಗ್ರಾಮೀಣ ಭಾಗಕ್ಕೂ ಬಸ್ ಸಂಚಾರ ಆರಂಭವಾಯಿತು. ರಾಯಚೂರಿನಿಂದ ಚಂದ್ರಬಂಡಾ ಗ್ರಾಮಕ್ಕೆ ಬಸ್ ಟಿಕೆಟ್ ದರ ₹ 20-22 ಇದೆ. ಆದರೆ, ಆಟೋದವರು ₹ 25-30 ದರ ನಿಗದಿಪಡಿಸಿದ್ದಾರೆ. ದರ ಹೆಚ್ಚಿಸಿದ್ದರ ಕುರಿತು ಕಾರಣ ಹೇಳುತ್ತಿದ್ದರೂ ಆಟೋದವರು ಮಾತ್ರ ಬಾಯಿ ಬಿಡುತ್ತಿಲ್ಲ.
ಆಟೋ, ಜೀಪ್ಗಳತ್ತ ಒಲವು ತೋರುತ್ತಿರುವ ಗ್ರಾಮೀಣ ಜನತೆ ಗ್ರಾಮೀಣ ಜನರು ಕೂಲಿಗಾಗಿ ನಗರದತ್ತ ಹೋಗುತ್ತಾರೆ. ರೈತರು ಬೆಳೆದಂತಹ ತರಕಾರಿಯನ್ನು ಮಾರುಕಟ್ಟೆಗೆ ಕೊಂಡುಯ್ಯುತ್ತಾರೆ. ಆದರೆ, ಸರುಕು ಸಾಗಿಸುವ ವಾಹನಗಳು ದರ ಏರಿಸಿವೆ. ಈ ಮೂಲಕ ಗ್ರಾಮೀಣ ಭಾಗದ ಜನರಿಗೆ ಓಡಾಟಕ್ಕೆ ಅನುಕೂಲವಾಗಿರುವ ವಾಹನಗಳು ದರ ಏರಿಸುವ ಮೂಲಕ ಮತ್ತಷ್ಟು ತೊಂದರೆ ಉಂಟು ಮಾಡಿವೆ.