ಕರ್ನಾಟಕ

karnataka

ETV Bharat / state

ಮಳೆಯಿಂದ ಎರಡು ಮನೆಗಳ ಮೇಲ್ಛಾವಣಿ ಕುಸಿತ: ಪರಿಹಾರ ನೀಡುವಂತೆ ಒತ್ತಾಯ

ಬುಧವಾರ ಸುರಿದ ಮಳೆಯಿಂದ ರಾಯಚೂರಲ್ಲಿ ಎರಡು ಮನೆಗಳ ಮೇಲ್ಛಾವಣಿಗಳು ಕುಸಿದು ಬಿದ್ದಿವೆ.

Roof collapse
ಮಳೆಯಿಂದ ಎರಡು ಮನೆಗಳ ಮೇಲ್ಛಾವಣಿ ಕುಸಿತ..

By

Published : Jul 16, 2020, 2:58 PM IST

ರಾಯಚೂರು: ನಗರದಲ್ಲಿ ನಿನ್ನೆ ಸುರಿದ ಮಳೆಯಿಂದಾಗಿ ಎರಡು ಮನೆಗಳ ಮೇಲ್ಛಾವಣಿ ಕುಸಿದಿವೆ.

ಮಳೆಯಿಂದ ಎರಡು ಮನೆಗಳ ಮೇಲ್ಛಾವಣಿ ಕುಸಿತ: ಪರಿಹಾರ ನೀಡುವಂತೆ ಒತ್ತಾಯ..

ನಗರದ ಮಕ್ತಲ್ ಪೇಟೆ ಬಡಾವಣೆಯ ವಾರ್ಡ್ ನಂ-25ರಲ್ಲಿ ಘಟನೆ ಸಂಭವಿಸಿದೆ. 75 ವರ್ಷ ಅಂಜನಮ್ಮ ಹಾಗೂ ಯ‌ಂಕಮ್ಮ ಎಂಬುವರಿಗೆ ಸೇರಿದ ಮನೆಗಳ ಮೇಲ್ಛಾವಣಿ ಕುಸಿದಿದ್ದು, ಮನೆಯಲ್ಲಿನ ದಿನ ಬಳಕೆ ವಸ್ತುಗಳು, ಆಹಾರ ಧಾನ್ಯಗಳು ನಾಶವಾಗಿವೆ. ಅದೃಷ್ಟವಶಾತ್ ಯಾವುದೇ ಜೀವ ಹಾನಿ ಸಂಭವಿಸಿಲ್ಲ.

ಮಳೆಯಿಂದ ಎರಡು ಮನೆಗಳ ಮೇಲ್ಛಾವಣಿ ಕುಸಿತ: ಪರಿಹಾರ ನೀಡುವಂತೆ ಒತ್ತಾಯ

ಸದ್ಯ ವಾಸಿಸಲು ನೆಲೆಯಿಲ್ಲದೆ ಪರದಾಡುವಂತಾಗಿದ್ದು, ಪರಿಹಾರ ಒದಗಿಸುವಂತೆ ಅವರು ಒತ್ತಾಯಿಸಿದ್ರು.

ABOUT THE AUTHOR

...view details