ರಾಯಚೂರು:ಅಕ್ರಮ ಕೂಟ ರಚಿಸಿಕೊಂಡು ಜನರನ್ನ ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ ಗ್ಯಾಂಗನ್ನು ರಾಯಚೂರು ಜಿಲ್ಲೆಯ ಪೊಲೀಸರು ಬಂಧಿಸುವಲ್ಲಿ ಯಶ್ವಸಿಯಾಗಿದ್ದಾರೆ.
ರಾಯಚೂರು: ಬೆದರಿಕೆ ಹಾಕಿ ಹಣ ವಸೂಲಿ ಮಾಡಿದ್ದ ಗ್ಯಾಂಗ್ ಅಂದರ್
ಬೆದರಿಸಿ ಹಣ ವಸೂಲಿ ಮಾಡಿದ್ದ ಗ್ಯಾಂಗನ್ನು ರಾಯಚೂರು ಜಿಲ್ಲೆಯ ಪೊಲೀಸರು ಬಂಧಿಸಿದ್ದಾರೆ. 12 ಆರೋಪಿಗಳನ್ನು ಬಂಧಿಸಿದ್ದು, ಉಳಿದವರಿಗಾಗಿ ಬಲೆ ಬೀಸಿದ್ದಾರೆ.
ರಾಯಚೂರು ತಾಲೂಕಿನ ಶಕ್ತಿನಗರ ಕಾಲೋನಿಯ ವೈಟಿಪಿಎಸ್ ಕೇರಳ ಗುತ್ತಿಗೆದಾರ ಹರ್ಷನ್ ಮನೆ ಮೇಲೆ ಮೇ 7ರಂದು ರಾತ್ರಿ ಯದ್ಲಾಪುರ ಮಹ್ಮದ್ ಗೌಸ್ ಗ್ಯಾಂಗ್ ದಾಳಿ ಮಾಡಿ ಜೀವಬೆದರಿಕೆ ಹಾಕಿ 20 ಲಕ್ಷ ರೂಪಾಯಿ ಡಿಮ್ಯಾಂಡ್ ಮಾಡಿತ್ತು. ಬಲವಂತವಾಗಿ 5 ಲಕ್ಷ ರೂಪಾಯಿಯನ್ನ ಹರ್ಷನ್ ಬ್ಯಾಂಕ್ ಖಾತೆಯಿಂದ ವರ್ಗಾವಣೆ ಮಾಡಿಸಿಕೊಂಡು ಗ್ಯಾಂಗ್ ಪರಾರಿಯಾಗಿ, 15 ಲಕ್ಷ ನೀಡುವಂತೆ ಬೇಡಿಕೆ ಇಟ್ಟಿತ್ತು. ಒಂದು ವೇಳೆ ಹಣ ನೀಡಿದಿದ್ರೆ ಹತ್ಯೆ ಮಾಡುವುದಾಗಿ ಬೇದರಿಕೆ ಹಾಕಿದ್ರು.
ಇದರಿಂದ ಗಾಬರಿಕೊಂಡ ಗುತ್ತಿಗೆದಾರ ಶಕ್ತಿನಗರ ಠಾಣೆಗೆ ದೂರು ನೀಡಿದ್ರು. ದೂರಿನ ಆಧಾರದ ಮೇಲೆ ತನಿಖೆ ಆರಂಭಿಸಿದ ಪೊಲೀಸರು, 12 ಆರೋಪಿಗಳನ್ನು ಬಂಧಿಸಿದ್ದಾರೆ. ಗ್ಯಾಂಗ್ನ ಪ್ರಮುಖ ಆರೋಪಿ ಮಹ್ಮದ್ ಗೌಸ್ ಹಾಗೂ ಇತರರನ್ನು ಸೆರೆ ಹಿಡಿಯಲು ಬಲೆ ಬೀಸಿರುವುದಾಗಿ ತಿಳಿಸಿದ್ದಾರೆ.