ರಾಯಚೂರು:ನಗರದ ಗಂಜ್ ಸರ್ಕಲ್ನಲ್ಲಿ ಹದ್ದಗೆಟ್ಟ ರಸ್ತೆಗೆ ಪೊಲೀಸರು ಮಣ್ಣು ಹಾಕುವ ಮೂಲಕ ರಸ್ತೆ ಗುಂಡಿ ಮುಚ್ಚಿದ್ದಾರೆ.
ರಾಯಚೂರಲ್ಲಿ ಪೊಲೀಸರೇ ಮಾಡಿದ್ರು ರಸ್ತೆ ರಿಪೇರಿ... ಏಕೆ ಗೊತ್ತಾ? - ಸಂಚಾರಿ ಪೊಲೀಸ್ ರು
ರಾಯಚೂರು ನಗರದ ಗಂಜ್ ಸರ್ಕಲ್ನಲ್ಲಿ ಹದ್ದಗೆಟ್ಟ ರಸ್ತೆಗೆ ಪೊಲೀಸರು ಮಣ್ಣು ಹಾಕುವ ಮೂಲಕ ರಸ್ತೆ ಗುಂಡಿ ಮುಚ್ಚಿದ್ದಾರೆ.
ಪೊಲೀಸರೆ ಮಾಡಿದ್ರು ರಸ್ತೆ ರಿಪೇರಿ
ನಗರದಲ್ಲಿ ಗಂಜ್ ಸರ್ಕಲ್ ಬಳಿ ನಿತ್ಯ ನೂರಾರು ವಾಹನಗಳು ಓಡಾಡುತ್ತವೆ. ಈ ರಸ್ತೆಗಳಲ್ಲಿ ಹಲವು ದಿನಗಳಿಂದ ತಗ್ಗು-ಗುಂಡಿಗಳು ಬಿದ್ದಿದ್ದು, ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ಇದನ್ನ ಸರಿಪಡಿಸಲು ನಗರಸಭೆಗೆ ಸಾರ್ವಜನಿಕರು ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿ, ಸಿಬ್ಬಂದಿ ಮನವಿ ಮಾಡಿದ್ರು. ಆದ್ರೆ ನಗರಸಭೆ ಅಧಿಕಾರಿಗಳು ಇದಕ್ಕೆ ಸ್ಪಂದಿಸಿಲ್ಲ.
ಇದರಿಂದ ಬೇಸತ್ತ ಸಂಚಾರಿ ಪೊಲೀಸರು ಜೆಸಿಬಿ ಯಂತ್ರದ ಮೂಲಕ ರಸ್ತೆಯ ಮೇಲಿನ ಗುಂಡಿಗಳನ್ನು ಮುಚ್ಚುವ ಮೂಲಕ ರಸ್ತೆಯನ್ನ ರಿಪೇರಿ ಮಾಡಿದ್ದಾರೆ.