ಕರ್ನಾಟಕ

karnataka

ETV Bharat / state

ಎತ್ತಿನ ಬಂಡಿಗೆ ಟ್ರ್ಯಾಕ್ಟರ್​ ಡಿಕ್ಕಿ: ಮಹಿಳೆ ಸ್ಥಳದಲ್ಲೇ ಸಾವು - ಎತ್ತಿನ ಬಂಡಿಗೆ ಟ್ರ್ಯಾಕ್ಟರ್​ ಡಿಕ್ಕಿ

ಅಪಘಾತದಲ್ಲಿ ಮೃತಪಟ್ಟ ಮಹಿಳೆಯನ್ನ ಚಂದಮ್ಮ(45) ಎಂದು ಗುರುತಿಸಲಾಗಿದೆ.

women death in raichur
women death in raichur

By

Published : Jan 21, 2021, 1:08 AM IST

ಲಿಂಗಸೂಗೂರು(ರಾಯಚೂರು):ಎತ್ತಿನ ಬಂಡಿಗೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ಎತ್ತಿನ ಬಂಡಿಯಲ್ಲಿದ್ದ ಮಹಿಳೆ ಸ್ಥಳದಲ್ಲೇ ಸ್ವಾನ್ನಪ್ಪಿರುವ ಘಟನೆ ರಾಯಚೂರಿನ ಮುದಗಲ್ ಬಳಿ‌ ಜರುಗಿದೆ.

ಓದಿ: ಮನೆ ಮುಂದೆ ನಿಲ್ಲಿಸಿದ ಬೈಕ್​ಗೆ ಬೆಂಕಿ ಹಚ್ಚಿದ ಕಿಡಿಗೇಡಿ... ಸಿಸಿಟಿವಿಯಲ್ಲಿ ವಿಡಿಯೋ ಸೆರೆ!

ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಬುದ್ದಿನಿ ಕ್ರಾಸ್ ಬಳಿ ದುರಂತ ಸಂಭವಿಸಿದೆ. ಅಪಘಾತದಲ್ಲಿ ಮೃತಪಟ್ಟ ಮಹಿಳೆಯನ್ನ ಚಂದಮ್ಮ(45) ಎಂದು ಗುರುತಿಸಲಾಗಿದೆ. ಹೊಲದಲ್ಲಿ ಕೆಲಸ ಮುಗಿಸಿಕೊಂಡು ಎತ್ತಿನ ಬಂಡಿಯಲ್ಲಿ ವಾಪಸ್ ಮನೆಗೆ ಬರುತ್ತಿದ್ದರು. ಈ ವೇಳೆ ಟ್ರ್ಯಾಕ್ಟರ್, ಎತ್ತಿನ ಬಂಡಿಗೆ ಡಿಕ್ಕಿ‌ ಹೊಡೆದಿದೆ. ಇದರಿಂದ ಬಂಡಿಯಲ್ಲಿದ್ದ ಮಹಿಳೆ ಸಾವನ್ನಪ್ಪಿದ್ದಾರೆ.

ಘಟನಾ ಸ್ಥಳಕ್ಕೆ ಮುದಗಲ್‌ ಠಾಣೆ ಪೊಲೀಸರು ಭೇಟಿ‌ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ABOUT THE AUTHOR

...view details