ರಾಯಚೂರು: ರಸ್ತೆ ಪಕ್ಕದಲ್ಲಿ ಸಿಮೆಂಟ್ ಕಲ್ಲಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಓರ್ವ ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಈ ಘಟನೆ ರಾಯಚೂರು ತಾಲೂಕಿನ ನಲ್ಲಬಂಡಾ ಕ್ರಾಸ್ ಬಳಿ ನಡೆದಿದೆ.
ತಿಮ್ಮಾಪುರ ಬಡಾವಣೆಯ ನಿವಾಸಿಗಳಾದ ದೀಪಕ್ (22), ಹುಸೇನ್(23) ಮೃತಪಟ್ಟವರೆಂದು ಗುರುತಿಸಲಾಗಿದೆ. ಪವನ್ ಎಂಬುವವರ ತಲೆಗೆ ಬಲವಾದ ಪೆಟ್ಟು ಬಿದ್ದಿದೆ. ಇಂದು ಬೆಳಗ್ಗೆ ತುಂಟಾಪುರ ಗ್ರಾಮದಿಂದ ಬೈಕ್ ಮೇಲೆ ಬರುವಾಗ ಓವರ್ ಸ್ಪೀಡ್ ಚಾಲನೆಯಿಂದ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಗಾಯಗೊಂಡ ಯುವಕನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.