ರಾಯಚೂರು: ಭೀಕರ ರಸ್ತೆ ಅಪಘಾತದಲ್ಲಿ ಆಂಧ್ರಪ್ರದೇಶ ಮೂಲದ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಓರ್ವ ವ್ಯಕ್ತಿ ಗಂಭೀರ ಗಾಯಗೊಂಡಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಮಸ್ಕಿ ಪಟ್ಟಣದ ಹೊರವಲಯದ ಗುಡದೂರು ನಾಲೆ ಹತ್ತಿರ ಈ ದುರ್ಘಟನೆ ನಿನ್ನೆ ತಡರಾತ್ರಿ ಸಂಭವಿಸಿದೆ.
ಬೈಕ್-ಬಸ್ ನಡುವೆ ಈ ರಸ್ತೆ ಅಪಘಾತದಲ್ಲಿ ಜರುಗಿದ್ದು, ಬೈಕ್ನಲ್ಲಿದ್ದ ನಾಲ್ವರ ಪೈಕಿ ಮೂವರು ಸ್ಥಳದಲ್ಲೇ ಸ್ವಾನ್ನಪ್ಪಿದ್ದರೆ, ಓರ್ವ ವ್ಯಕ್ತಿ ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುವನ್ನು ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.
ಮೃತಪಟ್ಟಿರುವ ಮೂವರು ಹಾಗೂ ಗಾಯಾಳುವನ್ನು ಆಂಧ್ರದ ನಂದ್ಯಾಲ ಮೂಲದವರು ಎಂದು ಹೇಳಲಾಗುತ್ತಿದೆ. ಭತ್ತ ಕಟಾವು ಯಂತ್ರದಲ್ಲಿ ಕೆಲಸ ಮಾಡುವ ಈ ನಾಲ್ವರು ಸೋಮವಾರ ರಾತ್ರಿ ಗುಡದೂರು ಗ್ರಾಮದಿಂದ ಮಸ್ಕಿ ಪಟ್ಟಣಕ್ಕೆ ಊಟ ಮಾಡುವುದಕ್ಕೆ ಬಂದಿದ್ದಾರೆ. ಊಟ ಮುಗಿದ ಬಳಿಕ ವಾಪಸ್ ಗುಡದೂರು ಗ್ರಾಮಕ್ಕೆ ತೆರಳುವಾಗ ಮಾರ್ಗಮಧ್ಯ ಈ ದುರುಂತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಮಸ್ಕಿ ಠಾಣೆಯಲ್ಲಿ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಈ ಕುರಿತು ಮೃತರ ಹಾಗೂ ಗಾಯಾಳುಗಳ ಕುಟುಂಬಸ್ಥರಿಗೆ ಮಾಹಿತಿ ರವಾನಿಸಲಾಗಿದ್ದು, ಪಾಲಕರು ಬಂದ ಬಳಿಕ ಮೃತರ ಪೂರ್ಣ ಮಾಹಿತಿ ತಿಳಿಯಲಿದೆ.
ಇದನ್ನೂ ಓದಿ:ಕಾಲುವೆಗೆ ಬಿದ್ದ ಕಾರು.. ಒಂದೇ ಕುಟುಂಬ ನಾಲ್ವರು ಸಾವು