ರಾಯಚೂರು:ಬೈಕ್ ಸವಾರನನ್ನು ಬಚಾವ್ ಮಾಡಲು ಹೋಗಿ ಸಾರಿಗೆ ಬಸ್ ರಸ್ತೆ ಪಕ್ಕದಲ್ಲಿನ ಗುಡ್ಡದ ಕಲ್ಲಿನ ಮೇಲೆ ನಿಂತಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ. ಚಾಲಕನ ಸಮಯ ಪ್ರಜ್ಞೆಯಿಂದ ಭಾರಿ ಅಪಾಯವೊಂದು ತಪ್ಪಿದೆ. ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಗೋಲಪಲ್ಲಿ ಗ್ರಾಮದ ಹೊರವಲಯದ ಬಳಿ ಬರುವ ಡೌನ್‌ನಲ್ಲಿ ನಿನ್ನೆ(ಮಂಗಳವಾರ) ಸಂಜೆ 7 ಗಂಟೆಯ ಸುಮಾರಿಗೆ ಈ ಘಟನೆ ನಡೆದಿದೆ.
ಲಿಂಗಸೂಗೂರು ಸಾರಿಗೆ ಬಸ್ ಡಿಪೋಗೆ ಸೇರಿದ ಕೆಎ- 36, ಎಫ್ 1425 ಬಸ್ ಬಳ್ಳಾರಿ, ಲಿಂಗಸೂಗೂರು, ಕಲಬುರಗಿಗೆ ಸಂಚರಿಸುತ್ತದೆ. ನಿನ್ನೆ (ಮಂಗಳವಾರ) ಸಂಜೆ 7 ಗಂಟೆಯ ಸುಮಾರಿಗೆ ಲಿಂಗಸೂಗೂರು ಕಡೆಯಿಂದ ಕಲಬುರಗಿ ಕಡೆ ಹೊರಟಿತ್ತು.