ಕರ್ನಾಟಕ

karnataka

ETV Bharat / state

ಮತಗಟ್ಟೆ ಬಳಿ ಗಲಾಟೆ: ಪೊಲೀಸರು-ಗ್ರಾಮಸ್ಥರ ಮಧ್ಯೆ ಮಾತಿನ ಚಕಮಕಿ - villagers' quarrel with police news

ದೇವದುರ್ಗ ತಾಲೂಕಿನ ಜುಟುಮರಡಿ ಗ್ರಾಮ
ದೇವದುರ್ಗ ತಾಲೂಕಿನ ಜುಟುಮರಡಿ ಗ್ರಾಮ

By

Published : Dec 22, 2020, 12:10 PM IST

Updated : Dec 22, 2020, 1:32 PM IST

12:01 December 22

ರಾಯಚೂರಿನ ದೇವದುರ್ಗ ತಾಲೂಕಿನ ಜುಟುಮರಡಿ ಗ್ರಾಮದಲ್ಲಿ ಮತಗಟ್ಟೆ ಕೇಂದ್ರದ 100ಮೀ. ಒಳಗಡೆ ಜನರು ಜಮಾವಣೆಗೊಂಡಾಗ ಪೊಲೀಸರು ಹೊರಹೋಗುವಂತೆ ಸೂಚಿಸಿದ್ದಾರೆ. ಈ ವೇಳೆ ಪೊಲೀಸರು ಮತ್ತು ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆದಿದೆ.

ಪೊಲೀಸರು-ಗ್ರಾಮಸ್ಥರ ಮಧ್ಯೆ ಮಾತಿನ ಚಕಮಕಿ

ರಾಯಚೂರು: ಜಿಲ್ಲೆಯ ದೇವದುರ್ಗ ತಾಲೂಕಿನ ಜುಟುಮರಡಿ ಗ್ರಾಮದಲ್ಲಿ ಮತಗಟ್ಟೆ ಕೇಂದ್ರದ 100 ಮೀಟರ್ ಒಳಗಡೆ ಜನರು ಬಂದಾಗ ಹೊರಹೋಗುವಂತೆ ಪೊಲೀಸರು ಹೇಳಿದ್ದಾರೆ. ಈ ವೇಳೆ ಪೊಲೀಸರು ಹಾಗೂ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆದಿದೆ.

ಮತಗಟ್ಟೆ ಕೇಂದ್ರದ 100ಮೀ. ಒಳಗಡೆ ಜನರು ಜಮಾವಣೆಗೊಂಡಿದ್ರು. ಈ ವೇಳೆ ಹೊರಗಡೆ ಹೋಗುವಂತೆ ಪೊಲೀಸರು ಗ್ರಾಮಸ್ಥರಿಗೆ ಹೇಳಿದ್ದಾರೆ. ಆಗ ಇಬ್ಬರ ನಡುವೆ ವಾಗ್ವಾದ ಉಂಟಾಗಿದೆ. ಇದರಿಂದ ಕೆಲಕಾಲ ಗೊಂದಲ ಉಂಟಾಗಿ, ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಬಳಿಕ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

ಓದಿ:ಮತಗಟ್ಟೆ ಎದುರೇ ಎರಡು ಗುಂಪುಗಳ ಮಧ್ಯೆ ಗಲಾಟೆ

ಇನ್ನು, ಗಲಾಟೆಯಲ್ಲಿ ಕಲ್ಲು ತೂರಾಟ ಮಾಡಿರುವ ಆರೋಪ ಕೇಳಿ ಬಂದಿತ್ತು. ಆದ್ರೆ ಪೊಲೀಸರು ಯಾವುದೇ ಕಲ್ಲು ತೂರಾಟವಾಗಿಲ್ಲವೆಂದು ಹೇಳಿದ್ದಾರೆ.

Last Updated : Dec 22, 2020, 1:32 PM IST

ABOUT THE AUTHOR

...view details