ರಾಯಚೂರು :ಲಿಂಗಸುಗೂರು, ಮಸ್ಕಿ ತಾಲೂಕಿನಿಂದ ವಿವಿಧ ಪ್ರದೇಶಗಳಿಗೆ ಉದ್ಯೋಗ ಅರಸಿ ಹೋಗಿ ಕೂಲಿ ಕಾರ್ಮಿಕರು ಲಾಕ್ಡೌನ್ಲ್ಲಿ ಸಿಲುಕಿಕೊಂಡಿದ್ದರು. ಇದೀಗ ಸರ್ಕಾರ ಅವರನ್ನು ಊರಿಗೆ ಕರೆತಂದು ಬಿಡುತ್ತಿರುವುದು ಕುಟುಂಬಸ್ಥರಲ್ಲಿ ಹರ್ಷ ಮೂಡಿಸಿದೆ.
ಶುಕ್ರವಾರ ರಾತ್ರಿ ಬಳ್ಳಾರಿಯಲ್ಲಿ ಸಿಲುಕಿಕೊಂಡಿದ್ದ ಲಿಂಗಸುಗೂರು ತಾಲೂಕಿನ ಊಟಿ ಚೆನ್ನಪ್ಪನದೊಡ್ಡಿ ಅಮರೇಶ ಭೀಮಣ್ಣ ಎಂಬುವವರ ಕುಟುಂಬವನ್ನು ಕರೆತಂದು ಗುರುಗುಂಟಾಕ್ಕೆ ಇಳಿಸಲಾಯಿತು. ನಂತರ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಕೀಯ ತಪಾಸಣೆ ನಡೆಸಿ ಕೆಲ ದಿನಗಳ ಕಾಲ ಅನಗತ್ಯವಾಗಿ ಹೊರಗೆ ತಿರುಗಾಡದಂತೆ ಎಚ್ಚರಿಕೆ ನೀಡಿ ಆಟೋ ಮೂಲಕ ಮನೆಗೆ ಕಳುಹಿಸಿ ಕೊಟ್ಟಿದ್ದಾರೆ.