ಲಿಂಗಸುಗೂರು (ರಾಯಚೂರು): ಜಿಲ್ಲೆಯ ಲಿಂಗಸುಗೂರು ತಾಲೂಕು ಸುಕ್ಷೇತ್ರ ಗುರುಗುಂಟಾ ಅಮರೇಶ್ವರ ದೇವಸ್ಥಾನ ಬಳಿಯ ಜಮೀನೊಂದರಲ್ಲಿ ಅಪಾರ ಪ್ರಮಾಣದ ಅಕ್ಕಿಯ ಪ್ಯಾಕೆಟ್ ಮುಚ್ಚಿರುವುದು ದನಗಾಯಿಗಳಿಂದ ಬಹಿರಂಗಗೊಂಡಿದೆ.
ಕಳೆದೆರಡು ದಿನಗಳಿಂದ ವಾಟ್ಸಾಪ್ನಲ್ಲಿ ಹರಿದಾಡುತ್ತಿದ್ದ ವಿಡಿಯೋ ನೋಡಿ, ಕೆಲ ಯುವಕರು ಪರಿಶೀಲನೆಗೆ ಹೊರಟಾಗ ಅಕ್ಕಿಯ ಚೀಲಗಳನ್ನು ಹುದುಗಿಸಿಟ್ಟಿರುವುದು ಕಂಡುಬಂದಿದೆ.
ಜಮೀನಿನಲ್ಲಿ ಸಿಕ್ಕವೂ ಹತ್ತಾರು ಅಕ್ಕಿ ಪ್ಯಾಕೆಟ್...ಕಾಳಸಂತೆಯ ಕೈವಾಡ ಶಂಕೆ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವವರು ಈ ಕೃತ್ಯ ಎಸಗಿರಬಹುದು ಎಂಬ ಸಂಶಯ ಮೂಡಿದೆ. ಇನ್ನು ಕೆಲವರು ದೇವಸ್ಥಾನದ ದಾಸೋಹದ ಅಕ್ಕಿಯನ್ನು ಕಳ್ಳತನದಿಂದ ತಂದು ಹೂತಿಟ್ಟು ಸಮಯ ಬಂದಾಗ ಸ್ಥಳಾಂತರ ಮಾಡುವ ಹುನ್ನಾರ ಇರಬಹುದೆಂದು ಸಂಶಯ ವ್ಯಕ್ತಪಡಿಸಿದ್ದಾರೆ.
ಯಾವುದಕ್ಕೂ ಆಹಾರ ಇಲಾಖೆ ಅಧಿಕಾರಿಗಳು ಬಡವರ ಅಥವಾ ಭಕ್ತರ ಹೊಟ್ಟೆ ತುಂಬಿಸುವ ಅಕ್ಕಿ ಮುಚ್ಚಿಟ್ಟ ಪ್ರಕರಣವನ್ನು ಪರಿಶೀಲಿಸಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ದೇವರಭೂಪುರ ಗ್ರಾಮಸ್ಥರು ಆಗ್ರಹಿಸಿದ್ದಾರೆ.