ಕರ್ನಾಟಕ

karnataka

ETV Bharat / state

ನಾಳೆಯಿಂದ ರಾಯರ ದರ್ಶನಕ್ಕಿಲ್ಲ ಅವಕಾಶ : ಶ್ರೀಮಠ ಪ್ರಕಟಣೆ - Sri Raghavendra Swamy temple closed due to the corona reason

ಮಂತ್ರಾಲಯ ಕ್ಷೇತ್ರದಲ್ಲಿ ಸ್ಥಳೀಯವಾಗಿ ಲಾಕ್​ಡೌನ್ ವಿಧಿಸಿರುವುದರಿಂದ, ಭಕ್ತರು ಮುಂದಿನ ಸೂಚನೆ ನೀಡುವವರೆಗೂ ರಾಯರ ದರ್ಶನಕ್ಕೆ ಬರುವಂತಿಲ್ಲ ಎಂದು ಶ್ರೀ ಮಠ ಪ್ರಕಟಣೆ ಹೊರಡಿಸಿದೆ.

restriction-on-the-darshan-of-sri-raghavendra-swamy
ಮಂತ್ರಾಲಯ

By

Published : Apr 30, 2021, 9:40 PM IST

ರಾಯಚೂರು: ಕೊರೊನಾ ಸೋಂಕಿನ 2ನೇ ಅಲೆ ಹೆಚ್ಚಾಗುತ್ತಿರುವ ಹಿನ್ನೆಲೆ ಮಂತ್ರಾಲಯದ ‌ಶ್ರೀರಾಘವೇಂದ್ರ ಸ್ವಾಮಿಗಳ ದರ್ಶನಕ್ಕೆ ನಾಳೆಯಿಂದ (ಮೇ,1) ಅವಕಾಶವಿಲ್ಲ ಎಂದು ಶ್ರೀಮಠ ಪ್ರಕಟಣೆಯಲ್ಲಿ ತಿಳಿಸಿದೆ.

2ನೇ ಅಲೆ ಸೋಂಕಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಹೀಗಾಗಿ ಶ್ರೀರಾಘವೇಂದ್ರ ಸ್ವಾಮಿಗಳ ದರ್ಶನ, ತೀರ್ಥ ಪ್ರಸಾದಕ್ಕೆ ಅವಕಾಶವಿಲ್ಲ. ಆದರೆ ಎಂದಿನಂತೆ ಪೂಜೆ, ಕೈಂಕರ್ಯ ನಡೆಯಲಿದ್ದು, ಭಕ್ತರು ಆನ್‌ಲೈನ್ ಮೂಲಕ ತಮ್ಮ ರಾಯರಿಗೆ ಸೇವೆಯನ್ನ ಸಲ್ಲಿಸಬಹುದಾಗಿದೆ.

ಶ್ರೀಮಠ ಪ್ರಕಟಣೆ

ಅಲ್ಲದೇ, ಮಂತ್ರಾಲಯ ಕ್ಷೇತ್ರದಲ್ಲಿ ಸ್ಥಳೀಯವಾಗಿ ಲಾಕ್​ಡೌನ್ ವಿಧಿಸಿರುವುದರಿಂದ, ಭಕ್ತರು ಮುಂದಿನ ಸೂಚನೆ ನೀಡುವವರೆಗೂ ಮಠಕ್ಕೆ ಬರುವಂತಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಓದಿ:ಕೋವಿಡ್ ರೋಗಿಗಳಿಗೆ ಉಚಿತ ಆಕ್ಸಿಜನ್ ಜೊತೆ ಊಟೋಪಚಾರ... ಪೃಥ್ವಿ ಫೌಂಡೇಶನ್ ಸಂಸ್ಥೆಯ ಮಮಕಾರ

ABOUT THE AUTHOR

...view details