ಕರ್ನಾಟಕ

karnataka

ETV Bharat / state

ಕೃಷ್ಣಾ ನದಿಯಲ್ಲಿ ಹೆಚ್ಚಿದ ನೀರಿನ ಪ್ರಮಾಣ: ಹೂವಿನ ಹೆಡಗಿ ಸೇತುವೆ ಮೇಲೆ ವಾಹನ ಸಂಚಾರಕ್ಕೆ ನಿರ್ಬಂಧ - ರಾಯಚೂರು ಮಳೆ ಸುದ್ದಿ

ಕೃಷ್ಣ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು, ದೇವದುರ್ಗ ತಾಲೂಕಿನ ಹೂವಿನ ಹೆಡಗಿ ಸೇತುವೆಗೆ ನೀರು ಸಮೀಪದಲ್ಲಿದೆ. ಈ ಹಿನ್ನೆಲೆಯಲ್ಲಿ ಸೇತುವೆ ಮೇಲೆ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.

ಹೂವಿನ ಹೆಡಗಿ ಸೇತುವೆ
ಹೂವಿನ ಹೆಡಗಿ ಸೇತುವೆ

By

Published : Aug 7, 2020, 1:13 PM IST

ರಾಯಚೂರು:ಕೃಷ್ಣಾ ನದಿಗೆ ಲಕ್ಷಾಂತರ ಕ್ಯೂಸೆಕ್ ನೀರು ಹರಿಬಿಟ್ಟ ಪರಿಣಾಮ ಹೂವಿನ ಹೆಡಗಿ ಸೇತುವೆ ಮೇಲೆ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.

ನಾರಾಯಣಪುರ ಡ್ಯಾಂನಿಂದ 1.84 ಲಕ್ಷ ಕ್ಯೂಸೆಕ್ ನೀರನ್ನು ಹರಿ ಬಿಡಲಾಗಿದ್ದು, ಜಿಲ್ಲೆಯ ದೇವದುರ್ಗ ತಾಲೂಕಿನ ಹೂವಿನಹೆಡಗಿ ಸೇತುವೆಗೆ ನೀರು ಸಮೀಪವಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ವಾಹನಗಳ ಸಂಚಾರವನ್ನು ನಿರ್ಬಂಧಿಸಿ, ಜಾಲಹಳ್ಳಿ ಮಾರ್ಗ‌ ಸಂಚಾರವನ್ನು ಬದಲಾಯಿಸಲಾಗಿದೆ. ಸೇತುವೆ ಮೇಲೆ ಯಾರೂ ಓಡಾಡದಂತೆ ಪೊಲೀಸ್ ಬಂದೋ‌ಬಸ್ತ್ ಕೈಗೊಳ್ಳಲಾಗಿದೆ.

ದೇವದುರ್ಗ ತಾಲೂಕಿನ ಕೊಪ್ಪರ ಶ್ರೀ ಲಕ್ಷ್ಮಿ ನರಸಿಂಹ ದೇವಾಲಯ ಹಾಗೂ ಗೂಗಲ್‌ನ ಶ್ರೀ ಅಲ್ಲಮ್ಮಪ್ರಭು ದೇಗುಲಕ್ಕೆ ನೀರು ಸನಿಹಕ್ಕೆ ಬಂದಿದ್ದು, ದೇವರಿಗೆ ಜಲಕಂಟಕ ಎದುರಾಗಿದೆ.

ABOUT THE AUTHOR

...view details